ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರಸಭೆ ವ್ಯಾಪ್ತಿಯ ವಾರ್ಡ್ ನಂ.35ರ ಭಂಡಾರಹಳ್ಳಿ ಅಂಗನವಾಡಿ-೨ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರಿಗಾಗಿ ಎದೆ ಹಾಲಿನ ಮಹತ್ವ ತಿಳಿಸಲು ಸ್ತನ್ಯಪಾನ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.
ಅಂಗನವಾಡಿ ಕಾರ್ಯಕರ್ತೆ ಎನ್. ಕವಿತಾ ಮಾತನಾಡಿ, ಪ್ರಸಕ್ತ ಸಾಲಿನ ಸರ್ಕಾರದ ಘೋಷವಾಕ್ಯ “ತಾಯಿಯ ಎದೆ ಹಾಲಿನ ಮಹತ್ವ ಮಕ್ಕಳ ಆರೋಗ್ಯಕರ ಭವಿಷ್ಯ” ಎಂಬುದಾಗಿದೆ. ಹೆರಿಗೆಯಾದ ಒಂದು ಗಂಟೆಯೊಳಗೆ ತಾಯಿ ತನ್ನ ಮಗುವಿಗೆ ಎದೆ ಹಾಲು ಕುಡಿಸಬೇಕು. #Breast Feeding ತಾಯಿಯ ಮೊದಲನೆ ಹಾಲು ರೋಗ ನಿರೋಧಕ ಶಕ್ತಿ(ಕೊಲೆಸ್ಟಂ) ಹೊಂದಿರುತ್ತದೆ. ಇದು ಮಕ್ಕಳಿಗೆ ಯಾವ ಕಾಯಿಲೆಗಳು ಸಹ ಬರದಂತೆ ತಡೆಗಟ್ಟುತ್ತದೆ. ಪದೇ ಪದೇ ಹಾಲು ಕೊಡುವುದರಿಂದ ತಾಯಿಯಲ್ಲಿ ರಕ್ತ ಸ್ರಾವ ಕಡಿಮೆಯಾಗುತ್ತದೆ ಎಂದರು.
6 ತಿಂಗಳು ತುಂಬುವವರೆಗೆ ಮಗುವಿಗೆ ತಾಯಿ ಹಾಲು ಬಿಟ್ಟು ಬೇರೇನೂ ಆಹಾರ ಕೊಡಬಾರದು. ಆರು ತಿಂಗಳ ನಂತರ ಎದೆ ಹಾಲಿನ ಜೊತೆಗೆ ತೆಳು ಮೃದು ಆಹಾರ ಕೊಡಬೇಕು. ಪ್ರತಿ ತಿಂಗಳು ತಪಾಸಣೆಗೆ ಹಾಜರಾಗಿ 2 ಟಿಡಿ ಚುಚ್ಚುಮದ್ದು ಪಡೆದುಕೊಳ್ಳಬೇಕು. ಗರ್ಭಿಣಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪೌಷ್ಠಿಕ ಆಹಾರ ಸೇವಿಸಬೇಕೆಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತೆ ಶೀಲಾ, ಸ್ಥಳೀಯ ಮಹಿಳಾ ಪ್ರಮುಖರಾದ ಶಾಂತಮ್ಮ, ರಂಜಿತಾ, ದೀಪಿಕಾ, ಕುಸುಮಾ, ವೇದಾವತಿ, ಪ್ರಜ್ಞಾಬಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post