ಭದ್ರಾವತಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಮಾಡಿರುವ ನೇಕ ಜನಪರ ಯೋಜನೆಗಳ ಅನುಷ್ಠಾನಗಳ ಕುರಿತು ಪಕ್ಷದ ಕಾರ್ಯಕರ್ತರು ನಾಗರೀಕರಿಗೆ ಮನವರಿಕೆ ಮಾಡಿಕೊಡುವುದರಿಂದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತದಾನ ಮಾಡುತ್ತಾರೆ ಎಂದು ಪ್ರೇಮಾ ವಿಜಯೇಂದ್ರ ಹೇಳಿದರು.
ಅವರು ನಗರ ಹಾಗು ಗ್ರಾಮಾಂತರ ಪ್ರದೇಶಗಳಾದ ಜನ್ನಾಪುರ, ಗಾಂಧಿನಗರ, ಬಿಳಕಿ ಕಣಕಟ್ಟೆ ಸೇರಿದಂತೆ ಹಲವೆಡೆ ಮಹಿಳಾ ಬೂತ್ ಮಟ್ಟದ ಸಭೆ ನಡೆಸಿ ರಾಘವೇಂದ್ರ ಪರವಾಗಿ ಮತಯಾಚನೆ ನಡೆಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಲೋಕಸಭಾ ಅಭ್ಯರ್ಥಿ ಬಿ.ವೈ. ರಾಘವೇಂದ್ರ ರವರ ಗೆಲುವು ನಿಶ್ಚಿತವಾಗಿದ್ದು ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಪಕ್ಷದ ಮಹಿಳಾ ಕಾರ್ಯಕರ್ತರು ಶ್ರಮವಹಿಸಿ ಕಾರ್ಯನಿರ್ವಹಿಸಬೇಕಿದೆ.
ಚುನಾವಣೆಯಲ್ಲಿ ಅಭ್ಯರ್ಥಿಯ ಗೆಲುವಿಗೆ ಪ್ರತಿ ಮತವೂ ಅಮೂಲ್ಯವಾಗಿದ್ದು ಕಾರ್ಯಕರ್ತೆಯರು ಸಂಘಟನೆಯ ಮೂಲಕ ಪ್ರತಿ ಮತದಾರರನ್ನು ಮತಗಟ್ಟೆಗೆ ಕರೆತಂದು ಬಿಜೆಪಿಗೆ ಮತ ಹಾಕಿಸಲು ಮುಂದಾಗಬೇಕು. ಚುನಾವಣಾ ದಿನಾಂಕ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂದು ತಿಳಿದು ಮನೆ-ಮನೆಗೆ ತೆರಳಿ ಮತದಾರರ ಮನತಲುಪುವಂತೆ ಮನವಿ ಮಾಡಿ ಪಕ್ಷದ ಅಭ್ಯರ್ಥಿಗೆ ಮತಹರಿದು ಬರುವಂತೆ ಮಾಡುವ ಮೂಲಕ ಅಭ್ಯರ್ಥಿಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿನರೇಂದ್ರಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲು ನಾವೆಲ್ಲರೂ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸೋಣ ಎಂದರು.
ಪಕ್ಷದ ಮಹಿಳಾ ಮುಖಂಡರಾದ ಹೇಮಾವತಿ ವಿಶ್ವನಾಥ್ ರಾವ್, ಚಂದ್ರಪ್ರಭ, ವಿದ್ಯಾಲಕ್ಷ್ಮಿಪತಿ, ಉಮಾ ರಮೇಶ್ ಸೇರಿದಂತೆ ಹಲವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post