ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭದ್ರಾವತಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ತರಂಗ ಶಾಲೆಯಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಕ್ಕಳು ಆಟವಾಡುವ ಮೈದಾನ ಸಾಕಷ್ಟು ಗಿಡಗಂಟೆಗಳಿಂದ ಬೆಳೆದಿದ್ದು, ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈ ವಿಚಾರವನ್ನು ಅಲ್ಲಿನ ಮುಖ್ಯ ಶಿಕ್ಷಕರು, ಸಹ ಶಿಕ್ಷಕಿಯರು ನಮ್ಮ ಸಂಘದ ಗಮನಕ್ಕೆ ತಂದು ಮಕ್ಕಳ ಆಟದ ಮೈದಾನವನ್ನು ಸ್ವಚ್ಛಗೊಳಿಸುವವಂತೆ ಎಂದು ಮನವಿ ಮಾಡಿದ್ದರು.
26 ನೇ ವಾರ್ಡಿನ ನಗರಸಭಾ ಸದಸ್ಯರಾದಂತಹ ಸರ್ವಮಂಗಲ ಭೈರಪ್ಪನವರು ಈ ಸಂದರ್ಭದಲ್ಲಿ ಹಾಜರಿದ್ದು, ನಗರಸಭೆ ವತಿಯಿಂದ ಹುಲ್ಲು ಕೀಳುವ ಯಂತ್ರವನ್ನು ತರಿಸಿ ಮಾಜಿ ಸೈನಿಕರ ಸಹಕಾರದೊಂದಿಗೆ ಆಟದ ಮೈದಾನವನ್ನು ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಅಶೋಕ್, ದಿನೇಶ್, ಕಾರ್ಯದರ್ಶಿ ಜಿ. ವಿ. ಗಿರಿ, ಬೋರೇಗೌಡರು, ಹರೀಶ್, ಅಭಿಲಾಶ್, ಶ್ರೀಧರ್, ಭೂಪಾಲ್ ಕಮಾಂಡೋ ಗಿರಿ, ಹಿರಿಯ ಮಾಜಿ ಸೈನಿಕರಾದ ಮುದಗಲ ರಾಮರೆಡ್ಡಿ, ಮುರುಳೀಧರನ್ ಇನ್ನು ಇತರ ಎಲ್ಲಾ ಮಾಜಿ ಸೈನಿಕರು ಸೇರಿ ಮಕ್ಕಳ ಆಟದ ಮೈದಾನ ಸ್ವಚ್ಛ ಗಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post