ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಎಸ್’ಎಐಎಲ್-ವಿಐಎಸ್’ಎಲ್ ವತಿಯಿಂದ ದೊಡ್ಡೇರಿ ಗ್ರಾಮ ಪಂಚಾಯ್ತಿಯಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿತು.
ದೊಡ್ಡೇರಿ ಗ್ರಾಮದಲ್ಲಿ ವಿಐಎಎಸ್’ಎಲ್, ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಶಿಬಿರವನ್ನು ಎಸ್’ಎಐಎಲ್-ವಿಐಎಸ್’ಎಲ್ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ, ಜೊತೆಗೆ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ದುಲಾರಿ ಚಂದ್ವಾನಿ, ದೊಡ್ಡೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಧು ಸಿ. ಲೇಪಾಕ್ಷ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧುಸೂಧನ್ ಉದ್ಘಾಟಿಸಿದರು.

ವಿಐಎಸ್’ಎಲ್ ಆಸ್ಪತ್ರೆಯ ತಜ್ಞರಾದ ಡಾ.ಎಚ್. ಶೋಭಾ, ಡಾ. ಎಂ.ವೈ. ಸುರೇಶ್ ಮತ್ತು ಡಾ. ಎಸ್.ಎನ್. ಸುರೇಶ್, ಸಾಮಾನ್ಯ ಆರೋಗ್ಯ, ಮೂಳೆ ಮತ್ತು ದಂತ ಸಮಸ್ಯೆಗಳ ಬಗ್ಗೆ ತಜ್ಞರ ಸಲಹೆಯನ್ನು ನೀಡಿದರು. ಇದರಲ್ಲಿ ಲಿಲ್ಲಿ ಮರಿಯ, ಟಿ.ಎನ್. ಕೃಷ್ಣ, ಅಲೆನ್ ಜುಡೊ ಪಿಂಟೊ, ಮಧುಕರ್ ಮತ್ತು ಆರ್. ಮಂಜುನಾಥ್ ಸಹಕರಿಸಿದರು.
ಶಂಕರ ಕಣ್ಣಿನ ಆಸ್ಪತ್ರೆಯ ತಜ್ಞರಾದ ಡಾ. ಮೊಹಮ್ಮದ್ ಶಹಬಾಜ್, ರವೀಂದ್ರ, ಅನ್ಶಾದ್ ಮತ್ತು ಕು.ಭೂಮಿಕಾ ನೇತ್ರ ಪರೀಕ್ಷೆಗಳನ್ನು ನಡೆಸಿ ನೇತ್ರ ಆರೈಕೆಯ ಬಗ್ಗೆ, ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞರಾದ ಡಾ. ಶರತ್, ಡಾ. ಮಾವಿಶ್ ಎಂ. ಕರಕ, ಕು.ಅಶ್ವಿನಿ, ತಾಸಿನಾ, ಜೆನ್ನಿಫರ್, ಗಣೇಶ್ ಅವರು ಹೃದಯ ಸಂಬಂಧಿ ಪರೀಕ್ಷೆಗಳನ್ನು ನಡೆಸಿ, ಹೃದ್ರೋಗ ಆರೈಕೆಯ ಬಗ್ಗೆ ತಜ್ಞರ ಸಲಹೆಯನ್ನು ನೀಡಿದರು.

ಕಾರ್ಯಕ್ರಮವನ್ನು ವಿಐಎಸ್’ಎಲ್ ಆಸ್ಪತ್ರೆ ಮತ್ತು ಸಿಬ್ಬಂದಿ ಇಲಾಖೆ ಮತ್ತು ದೊಡ್ಡೇರಿ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಸಂಯೋಜಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post