ಭದ್ರಾವತಿ: ಮನೆಗಳಲ್ಲಿ ಉಪಯೋಗಿಸದೆ ನಿರುಪಯುಕ್ತ ಬಟ್ಟೆ, ಸೀರೆ, ಪುಸ್ತಕ ಮತ್ತಿತರೆ ಪರಿಕರಗಳನ್ನು ಬಿಸಾಡದೆ ಕೊಳ್ಳಲು ಸಾಮರ್ಥವಿರದ ಇತರರಿಗೆ ನೀಡುವಂತಹ ಅಭ್ಯಾಸ ಮಾಡಿಕೊಳ್ಳಿ ಎಂದು ಪೌರಾಯುಕ್ತ ಮನೋಹರ್ ಕರೆ ನೀಡಿದರು.
ನಗರದ ಶಿವಶಂಕರಯ್ಯ ಪೆಟ್ರೋಲ್ ಬಂಕ್‍ನಲ್ಲಿ ಬಿಪಿಸಿಎಲ್ ಕಂಪನಿಯ ವತಿಯಿಂದ ಹಮ್ಮಿಕೊಂಡಿದ್ದ ಕರುಣೆಯ ಗೋಡೆ ಎಂಬ ನೂತನ ಕಾರ್ಯಕ್ರಮದಲ್ಲಿ ಅಗತ್ಯವಿರುವವರಿಗೆ ಬೇಕಾದ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಪೆಟ್ರೋಲ್ ಬಂಕ್‍ನಲ್ಲಿ ನೂತನವಾಗಿ ಕಪಾಟುಗಳನ್ನು ತೆರೆದು ನಿಮಗೆ ಅಗತ್ಯವಿಲ್ಲದಿದ್ದರೆ ಇಲ್ಲಿ ಇಡಿ, ಅಗತ್ಯ ವಿಲ್ಲದಿದ್ದರೆ ತೆಗೆದುಕೊಳ್ಳಿ ಎಂಬ ಕಪಾಟುಗಳನ್ನು ತೆರೆಯಲಾಗಿದೆ. ಮಾರುಕಟ್ಟೆಗಳಲ್ಲಿ ಖರೀಧಿಸಿರುವ ಯಾವುದಾದರೂ ವಸ್ತುಗಳು ತಮಗೆ ಬೇಡವಾದಲ್ಲಿ ಕಪಾಟಿನಲ್ಲಿರಿಸಿದ್ದಲ್ಲಿ ಬೇಕಾಗಿರುವವರು ತೆಗೆದುಕೊಂಡು ಉಪಯೋಗಿಸಿಕೊಳ್ಳಲು ಅನುಕೂಲವಾಗಲಿದೆ. ಬೇಡವಾಗಿರುವ ವಸ್ತುಗಳೆಂದು ಬಿಸಾಡಿದ್ದಲ್ಲಿ ಯಾರಿಗೂ ಪ್ರಯೋಜನವಾಗದಿರುವ ಹಿನ್ನಲೆಯಲ್ಲಿ ಬಿಪಿಸಿಎಲ್ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಕಾರ್ಮಿಕ ನಿರೀಕ್ಷಕ ಭೀಮೇಶ್ ಮಾತನಾಡಿ ಕಂಪನಿಯ ಆಡಳಿತ ಮಂಡಳಿಯ ಪ್ರಯತ್ನದಿಂದ ತೆರೆಯಲಾಗಿರುವ ಕರುಣೆಯ ಗೋಡೆಯಿಂದ ನಿರ್ಗತಿಕರಿಗೆ, ವಸ್ತುಗಳನ್ನು ಕೊಳ್ಳುವ ಸಾಮರ್ಥವಿರದ ನೂರಾರು ಜನರಿಗೆ ಅನುಕೂಲವಾಗಲಿದೆ. ಇದಕ್ಕೆ ಸಾಮರ್ಥವಿರುವವರು ಪೆಟ್ರೋಲ್ ಬಂಕ್‍ನಲ್ಲಿ ತೆರೆಯಲಾದ ಕಪಾಟಿನಲ್ಲಿ ಇಡುವ ವ್ಯವಸ್ಥೆ ಕಲ್ಪಿಸಿದ್ದಲ್ಲಿ ಪರರಿಗೆ ಉಪಕಾರವಾಗಲಿದೆ ಎಂದರು. ಈ ಸಂದರ್ಭದಲ್ಲಿ ಬಿಪಿಸಿಎಲ್ ಮಾರುಕಟ್ಟೆ ವ್ಯವಸ್ಥಾಪಕ ಸಾಗರ್, ದಾನಿ ದೀಪಕ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post