ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕೇಂದ್ರ ಸರ್ಕಾರದ ಯೋಜನೆಯಂತೆ ಸರಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದ ನಾಲ್ಕನೇ ತರಗತಿಯ ವರೆಗೆ ಓದುತ್ತಿರುವ ಮಕ್ಕಳಿಗೆ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಯೋಜನೆ ಅಡಿಯಲ್ಲಿ ಹಳೇನಗರದ ನಾಲ್ಕನೇ ವಾರ್ಡಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಬೆಚ್ಚಗಿನ ಉಡುಪು ಉಲ್ಲನ್ ಸ್ವೆಟರ್’ಗಳನ್ನು ವಿತರಣೆ ಮಾಡಲಾಯಿತು.
ಈ ಯೋಜನೆಯ ಅಡಿಯಲ್ಲಿ ಪ್ರಧಾನ ಮಂತ್ರಿ ಮೋದಿಜಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸದ ಬಿ. ವೈ. ರಾಘವೇಂದ್ರ ಅವರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸೂಚಿಸಿದ್ದರು. ಅದರಂತೆ ಕಾರ್ಯಕ್ರಮ ನಡೆಸಲಾಯಿತು.
ಇದರಂತೆ ಹಳೇನಗರದ ನಾಲ್ಕನೇ ವಾರ್ಡಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಬೆಚ್ಚಗಿನ ಉಡುಪು ಉಲ್ಲನ್ ಸ್ವೆಟರ್’ಗಳನ್ನು ಈ ಭಾಗದ ನಗರಸಭಾ ಸದಸ್ಯರಾದ ಅನುಪಮಾ ಚೆನ್ನೇಶ್ ರವರು ವಿತರಿಸಿದರು.
ಮುಖಂಡರಾದ ಮಂಗೋಟೆ ರುದ್ರೇಶ್, ನರಸಿಂಹಾಚಾರ್, ವೆಂಕಟೇಶ್, ಸಚ್ಚಿದಾನಂದ, ರಾಘವೇಂದ್ರ, ಮಂಜುನಾಥ್, ಹೇಮಲತಾ, ನಾಗರಾಜ್, ಶಾಲೆಯ ಉಪಾಧ್ಯಾಯರು ಮತ್ತು ಅಲ್ಲಿನ ಕಮಿಟಿಯ ಸದಸ್ಯರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post