ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಯಾರಿಗೆ ಮತ ಹಾಕಿದರೂ ಸರಿ. ಆದರೆ, ಜೆಡಿಎಸ್ ಪಕ್ಷಕ್ಕೆ ಮಾತ್ರ ಯಾರೂ ಮತ ಹಾಕಬೇಡಿ ಎಂದು ಸಿದ್ಧರಾಮಯ್ಯ ವ್ಯಂಗ್ಯಾತ್ಮಕವಾಗಿ ಹೇಳಿದರು.
ನಿನ್ನೆ ಭದ್ರಾವತಿಯಲ್ಲಿ ಮಾತನಾಡಿದ ಅವರು, ಜೆಡಿಎಸ್’ನವರಿಗೆ ಸಿದ್ಧಾಂತವೇ ಇಲ್ಲ. ಒಮ್ಮೆ ಕಾಂಗ್ರೆಸ್ ಜೊತೆಯಲ್ಲಿ ಬರುತ್ತಾರೆ, ಇನ್ನೊಮ್ಮೆ ಬಿಜೆಪಿ ಜೊತೆಗೆ ಹೋಗುತ್ತಾರೆ. ಯಾರು ಗೆಲ್ಲುತ್ತಾರೋ ಅವರ ಹಿಂದೆ ಹೋಗುವ ಮನಃಸ್ಥಿತಿಯ ಪಕ್ಷ ಅದು. ಅವರಿಗೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಕಟಕಿಯಾಡಿದರು.
ಇಂತಹ ಪಕ್ಷದಿಂದ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ. ಹೀಗಾಗಿ, ಆ ಪಕ್ಷಕ್ಕೆ ಮಾತ್ರ ಯಾರೂ ಮತ ಹಾಕಬೇಡಿ ಎಂದರು.
Also read: ನಾವು ಅಧಿಕಾರಕ್ಕೆ ಬಂದರೆ 10 ಕೆಜಿ ಉಚಿತ ಅಕ್ಕಿ ನೀಡುತ್ತೇವೆ: ಸಿದ್ಧರಾಮಯ್ಯ ಭರವಸೆ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















