ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಮಿಕರ ಸಂಘಕ್ಕೆ ಏಪ್ರಿಲ್ 4ರಂದು ಚುನಾವಣೆ ನಡೆಸಲಾಗುವುದು ಎಂದು ಚುನಾವಣಾಧಿಕಾರಿ ಇಳಯರಾಜ ತಿಳಿಸಿದ್ದಾರೆ.

ಚುನಾವಣಾ ವೇಳಾಪಟ್ಟಿಯ ವಿವರ ಹೀಗಿದೆ:
ಮತದಾರರ ಪಟ್ಟಿಯ ಪ್ರಕಟಣೆ ದಿನಾಂಕ 2021ರ ಮಾರ್ಚ್ 15, ತಿದ್ದುಪಡಿಗೆ 16 ಕೊನೆಯ ದಿನಾಂಕವಾಗಿದ್ದು, ಸಂಜೆ 4 ರಿಂದ 7ಗಂಟೆಯವರೆಗೆ ಅರ್ಜಿ ಸ್ವೀಕರಿಸಲಾಗುವುದು. 17ರಂದು ಸಂಜೆ 4ಗಂಟೆ ನಂತರ ಮತದಾರರ ಅಂತಿಮ ಪಟ್ಟಿಯ ಪ್ರಕಟಣೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

18ರಂದು ನಾಮಕರಣ ಸೂಚನಾ ಪತ್ರ ವಿತರಣೆ ಮಾಡಲಾಗುವುದು. ಮತ್ತು 20ರ ಸಂಜೆ ಅಭ್ಯರ್ಥಿಗಳ ನಾಮಕರಣ ಸೂಚನಾಪತ್ರ ಸ್ವೀಕರಿಸಲು ಕೊನೆಯದಿನವಾಗಿದೆ. 21ರಂದು ಸಂಜೆ 4ರಿಂದ 7ಗಂಟೆಯವರೆಗೆ ಸೂಚನಾಪತ್ರಗಳನ್ನು ಪರಿಶೀಲಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
22ರ ಸಂಜೆ 5ಗಂಟೆಗೆ ಸ್ಪರ್ಧಾಳುಗಳ ಪಟ್ಟಿ ಪ್ರಕಟಣೆ ಮಾಡಲಾಗುವುದು. 24ರ ಸಂಜೆ 4ರಿಂದ 7ಗಂಟೆಯವರೆಗೆ ನಾಮಪತ್ರವನ್ನು ವಾಪಸ್ಸು ಪಡೆಯಲು ಕೊನೆಯ ದಿನವಾಗಿದೆ. 25ರಂದು ಗುರುತು ವಿವರಿಸಲಾಗುವುದು. ಹಾಗೂ 26ರ ಬೆಳಿಗ್ಗೆ 10ಗಂಟೆಗೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ ಮಾಡಲಾಗುವುದು ಎಂದಿದ್ದಾರೆ.

ಏ.4ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಚುನಾವಣೆಯ ನಡೆಯಲಿದ್ದು, ಅಂದು ಸಂಜೆ 5ಗಂಟೆಗೆ ಮತಗಳ ಎಣಿಕೆ ಮತ್ತು ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















