ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಾಡಿನಾದ್ಯಂತ ನವರಾತ್ರಿ ಹಬ್ಬದ ಆಚರಣೆ ಸಂಭ್ರಮ, ಸಡಗರದಿಂದ ಜರುಗುತ್ತಿದ್ದು, ನವದುರ್ಗೆಯರನ್ನು 9 ದಿನಗಳ ಕಾಲ ಪೂಜಿಸುವ ನವರಾತ್ರಿ ಹಬ್ಬ ಮಹಿಳೆಯರ ಪಾಲಿಗೆ ವಿಶೇಷವಾಗಿದೆ.
ನವರಾತ್ರಿ ಪ್ರಮುಖ ಆಕರ್ಷಣೆ ದಸರಾ ಗೊಂಬೆ. ಈ ಪದ್ಧತಿಯನ್ನು ಕೆಲವರು ತಮ್ಮ ಹಿಂದಿನ ತಲೆಮಾರುಗಳಿಂದಲೂ ಅನುಸರಿಸಿಕೊಂಡು ಬರುತ್ತಿದ್ದು, ಭದ್ರಾವತಿಯ ಖ್ಯಾತ ಆಡಿಟರ್ ಶ್ರೀಪಾದ್ ಅವರ ಪತ್ನಿ ಚಂದ್ರಿಕಾ ಶ್ರೀಪಾದ್ ತಮ್ಮ ನಿವಾಸದಲ್ಲಿ ನವರಾತ್ರಿ ಗೊಂಬೆ ಅಲಂಕಾರ ಮಾಡಿರುವುದು ಅತ್ಯಾಕರ್ಷಕವಾಗಿದೆ.
ಶ್ರೀಗೌರಿ, ಹುಲಿಯ ಮೇಲೆ ಕುಳಿತಿರುವ ದುರ್ಗೆ, ಶ್ರೀಕೃಷ್ಣ, ಪಟ್ಟಾಭಿಷೇಕ ಶ್ರೀರಾಮಚಂದ್ರ, ರಂಗನಾಥಸ್ವಾಮಿ ಹೀಗೆ ಹಲವು ವಿವಿಧ ಬಗೆಯ ಪ್ರಕಾರದ ಗೊಂಬೆಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.
ನಾಡಿನೆಲ್ಲೆಡೆ ನಾಡ ಹಬ್ಬ ದಸರಾ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ಗೊಂಬೆ ಅಲಂಕಾರದ ಮೆರುಗು ವೈಭವವನ್ನು ಹೆಚ್ಚಿಸಿದೆ. ಇದಕ್ಕೆ ಮುಕುಟಪ್ರಾಯದಂತೆ ಭದ್ರಾವತಿಯ ಪ್ರಖ್ಯಾತ ಆಡಿಟರ್ ಶ್ರೀಪಾದ ಅವರ ನಿವಾಸದಲ್ಲಿ ಅನಾವರಣಗೊಂಡಿರುವ ಗೊಂಬೆ ಅಲಂಕಾರ ಗಮನ ಸೆಳೆಯುತ್ತಿದೆ.
Also read: ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನ
ಎನ್’ಎಂಸಿ 2ನೆಯ ಅಡ್ಡರಸ್ತೆಯಲ್ಲಿರುವ ಶ್ರೀಪಾದ ಅವರ ನಿವಾಸದಲ್ಲಿ ಅವರ ಪತ್ನಿ ಚಂದ್ರಿಕಾ ಅವರು ಅಲಂಕಾರ ಮಾಡಿರುವ ಗೊಂಬೆಗಳ ಪ್ರದರ್ಶನ ಸಾಂಪ್ರದಾಯಿತೆಯಿಂದ ಆಧುನಿಕತೆಯವರೆಗೂ ವಿವಿಧ ಮಜಲುಗಳನ್ನು ಅನಾವರಣಗೊಳಿಸಿದೆ.
ಚಂದ್ರಿಕಾ ಅವರು ಸುಮಾರು 26 ವರ್ಷಗಳಿಂದ ಈ ಗೊಂಬೆ ಅಲಂಕಾರ ಮಾಡುವ ಸಂಪ್ರದಾಯವನ್ನು ಪಾಲಿಸುತ್ತಿದ್ದು, ಈ ಬಡಾವಣೆಯ ದಸರಾ ವೈಭವದ ಮೆರುಗನ್ನು ಹೆಚ್ಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post