ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಸ್ಮರಣಾರ್ಥ ಡಿ.22ರಂದು ಉಚಿತ ನೇತ್ರ ತಪಾಸಣಾ, ನೇತ್ರ ಶಸ್ತ್ರ ಚಿಕಿತ್ಸೆ ಮತ್ತು ಮಸೂರ ಅಳವಡಿಕೆ ಹಾಗೂ ನೇತ್ರದಾನ ಶಿಬಿರ ಏರ್ಪಡಿಸಲಾಗಿದೆ.
ಬಿ.ಆರ್. ಪ್ರಾಜೆಕ್ಟ್‌ನ ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆ, ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ಸಿಂಗನಮನೆ ಮತ್ತು ತಾವರಘಟ್ಟ ಗ್ರಾಪಂ, ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಶಿವಮೊಗ್ಗ ಮತ್ತು ಸರ್ಕಾರಿ ಸಂಯುಕ್ತ ಆಸ್ಪತ್ರೆ ಬಿ.ಆರ್. ಪ್ರಾಜೆಕ್ಟ್ ಇವರ ಸಂಯುಕ್ತಾಶ್ರಯದಲ್ಲಿ, ಶಿವಮೊಗ್ಗ ಆಪ್ಟಿಕಲ್ಸ್ ಇವರ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಿಂಗನಮನೆ ಸರ್ಕಾರಿ ಸಂಯುಕ್ತ ಆಸ್ಪತ್ರೆ ಆವರಣದಲ್ಲಿ 22ರಂದು ಬೆಳಿಗ್ಗೆ 9ರಿಂದ 1:30ರವರೆಗೆ ನೇತ್ರದಾನ ನೋಂದಣಿ ಮತ್ತು ನೇತ್ರ ಶಸ್ತ್ರ ಚಿಕಿತ್ಸೆ ನಡೆಯಲಿದೆ.
ಶಿಬಿರದಲ್ಲಿ ಭಾಗವಹಿಸಲು ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವವರು ಕಡ್ಡಾಯವಾಗಿ 2 ರೇಷನ್ ಕಾರ್ಡ್‌ನ ಜೆರಾಕ್ಸ್ ಮತ್ತು 2 ಫೋಟೊಗಳನ್ನು ಮತ್ತು ವೋಟರ್ ಐಡಿಯನ್ನು ತರಬೇಕು.

ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷ ಮಹೇಶ್: 9986760750, ಜಯರಾಮ್: 9449612636, ಹೆಚ್.ಆರ್. ರಮೇಶ್ 9449795183, ಜೆ.ಬಿ. ತಮ್ಮಣ್ಣ: 9611806099, ಸ್ವರೂಪ್ ಜೈನ್: 9972452822, ಬಿ. ಶಂಕರಪ್ಪ 9448822088, ಶಂಕರ ಕಣ್ಣಿನ ಆಸ್ಪತ್ರೆ ಪಿಆರ್‌ಒ ಅವಿನಾಶ್: 9611115612, ಬಿ.ಆರ್. ಪ್ರಾಜೆಕ್ಟ್ ಸರ್ಕಾರಿ ಸಂಯುಕ್ತ ಆಸ್ಪತ್ರೆ ವೈದ್ಯಾಧಿಕಾರಿ 8277510552, ಶಂಕರ ಕಣ್ಣಿನ ಆಸ್ಪತ್ರೆ: 08182-222099, 222100ಗೆ ಸಂಪರ್ಕಿಸಬಹುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















