ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ. ಮೋಹನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜನ್ನಾಪುರದ ಎನ್’ಟಿಬಿ ಕಚೇರಿ ಆವರಣದಲ್ಲಿ ನಗರ ಆರೋಗ್ಯ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.
ರಕ್ತದಾನ ಅತ್ಯಂತ ಪವಿತ್ರವಾದ ಕಾರ್ಯ. ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂಬುದೆಲ್ಲಾ ಸುಳ್ಳು. ವೈಯಕ್ತಿಕವಾಗಿ ನಾನೂ ಸಹ ರಕ್ತದಾನದಲ್ಲಿ ತೊಡಗಿಸಿಕೊಂಡಿದ್ದೇನೆ. ಇದೊಂದು ಜೀವ ಉಳಿಸುವ ಪವಿತ್ರ ಕಾರ್ಯ ಎಂದರು.
ಆರೋಗ್ಯ ಕೇಂದ್ರದ ವೈದ್ಯೆ ಡಾ. ಕವಿತಾ, ನಗರಸಭಾ ಸದಸ್ಯ ಅನಿಲ್‌ಕುಮಾರ್, ಮೂಳೆ ರೋಗ ತಜ್ಞ ಡಾ. ಸುರೇಶ್, ಸರ್ಜನ್ ಡಾ. ರಾಜು, ದಂತ ತಜ್ಞ ಡಾ. ಸುರೇಶ್, ಚರ್ಮರೋಗ ತಜ್ಞ ಡಾ. ಭರತ್ ಕುಮಾರ್, ಸ್ತ್ರೀರೋಗ ತಜ್ಞೆ ಡಾ. ಸ್ಮೃತಿ, ಮಕ್ಕಳ ತಜ್ಞ ಡಾ. ಅಜಯ್, ರಕ್ತನಿಧಿ ಕೇಂದ್ರದ ಡಾ. ಅಶೋಕ್, ಆರೋಗ್ಯ ಕೇಂದ್ರದ ದೇವರಾಜ್, ಕಿರಣ್, ಸಚಿನ್, ಕೋಮಲಕುಮಾರಿ, ಸೆಲ್ವಿ, ಮಂಗಳ, ಶಿಲ್ಪ, ಉಷಾ ಮತ್ತು ಚೇತನ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post