ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರಸಭೆ ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ Gruhalakshmi Scheme ಫಲಾನುಭವಿಗಳನ್ನು ನೋಂದಾಯಿಸಿಕೊಳ್ಳಲು ಒಟ್ಟು 15 ಕೇಂದ್ರಗಳು ಹಾಗು ನೋಡಲ್ ಅಧಿಕಾರಿಗಳನ್ನು ನೇಮಕಗೊಳಿಸಲಾಗಿದೆ.
ವಾರ್ಡ್ ನಂ.1ರ ಹೆಬ್ಬಂಡಿ, 25ರ ಹುಡ್ಕೋಕಾಲೋನಿ, ಹಳೇಬುಳ್ಳಾಪುರ, 26ರ ಬಾಲಭಾರತಿ, ಬೆಣ್ಣೆಕೃಷ್ಣ ಸರ್ಕಲ್ ಮತ್ತು 29ರ ಕಿತ್ತೂರು ರಾಣಿ ಚೆನ್ನಮ್ಮ ಲೇಔಟ್, 30ರ ಸಿದ್ದಾಪುರ ಮತ್ತು 31ರ ಜಿಂಕ್ ಲೈನ್ ನಿವಾಸಿಗಳಿಗೆ ಹೊಸ ಸಿದ್ದಾಪುರ ತಾಲೂಕು ಮಾಜಿ ಸೈನಿಕರ ಸಂಘ ಸಮುದಾಯ ಭವನದಲ್ಲಿ ಕೇಂದ್ರ ತೆರೆಯಲಾಗಿದೆ. ಸಮುದಾಯ ಸಂಘಟಕಿ ಸುಮಿತ್ರ ಹರಪ್ಪನಹಳ್ಳಿ, ಮೊ: 7019567523 ನೋಡಲ್ ಅಧಿಕಾರಿಯಾಗಿದ್ದಾರೆ.
ವಾರ್ಡ್ ನಂ.19ರ ಎಂಪಿಎಂ ಆಸ್ಪತ್ರೆ, 20ರ ಸುರಗಿತೋಪು, 21ರ ಎಂಪಿಎಂ 6 ಮತ್ತು 8ನೇ ವಾರ್ಡ್, 22ರ ಉಜ್ಜನಿಪುರ, 23ರ ತಿಮ್ಲಾಪುರ ಮತ್ತು ದೊಡ್ಡಗೊಪ್ಪೇನ ಹಳ್ಳಿ (ಡಿ.ಜೆ ಹಳ್ಳಿ) ಹಾಗು 24ರ ಬೊಮ್ಮನಕಟ್ಟೆ ನಿವಾಸಿಗಳಿಗೆ ಸುರಗಿತೋಪು ಸಮುದಾಯ ಭವನದಲ್ಲಿ ಕೇಂದ್ರ ತೆರೆಯಲಾಗಿದೆ. ಸಮುದಾಯ ಸಂಘಟಕ ರವಿಕುಮಾರ್, ಮೊ: 9686913866 ನೋಡಲ್ ಅಧಿಕಾರಿಯಾಗಿದ್ದಾರೆ.
Also read: ಜ್ಞಾನವ್ಯಾಪಿ | ಹಿಂದೂಗಳಿಗೆ ಭರ್ಜರಿ ಮುನ್ನಡೆ | ಎಎಸ್’ಐನಿಂದ ಮಸೀದಿ ಸರ್ವೆಗೆ ನ್ಯಾಯಾಲಯ ಆದೇಶ
ವಾರ್ಡ್ ನಂ.2ರ ಲೋಯರ್ ಹುತ್ತಾ, 27ರ ಆಂಜನೇಯ ಆಗ್ರಹಾರ, ಕೂಲಿಬ್ಲಾಕ್ ಶೆಡ್, 28ರ ಗಣೇಶ್ ಕಾಲೋನಿ, 32ರ ಜನ್ನಾಪುರ, 33ರ ಹುತ್ತಾ ಕಾಲೋನಿ, 34ರ ಅಪ್ಪರ್ ಹುತ್ತಾ, ಸಂಜಯ್ ಕಾಲೋನಿ, 35ರ ಭಂಡಾರಹಳ್ಳಿ ನಿವಾಸಿಗಳಿಗೆ ಜನ್ನಾಪುರ ಎನ್ಟಿಬಿ ಕಛೇರಿಯಲ್ಲಿ ಕೇಂದ್ರ ತೆರೆಯಲಾಗಿದೆ. ದ್ವಿತೀಯ ದರ್ಜೆ ಸಹಾಯಕ ವೆಂಕಟೇಶ್, ಮೊ: 988004501 ನೋಡಲ್ ಅಧಿಕಾರಿಯಾಗಿದ್ದಾರೆ.
ವಾರ್ಡ್ ನಂ.3ರ ಬಿ.ಎಚ್ ರಸ್ತೆ ಎಡ ಮತ್ತು ಬಲ, 4ರ ಕನಕಮಂಟಪ ಪ್ರದೇಶ, 5ರ ಕೋಟೆ ಏರಿಯಾ, 6ರ ಸಿದ್ಧಾರೂಢ ನಗರ, 7ರ ಅನ್ವರ್ ಕಾಲೋನಿ, 8ರ ಸೀಗೆಬಾಗಿ, 9ರ ಭದ್ರಾ ಕಾಲೋನಿ, 17ರ ನೆಹರು ನಗರ ಮತ್ತು 18ರ ಎಂ.ಎಂ ಕಾಂಪೌಂಡ್ ನಿವಾಸಿಗಳಿಗೆ ಟಿ.ಕೆ ರಸ್ತೆ, ನಗರಸಭಾ ಕಾರ್ಯಾಲಯದಲ್ಲಿ ಕೇಂದ್ರ ತೆರೆಯಲಾಗಿದೆ. ದ್ವಿತೀಯ ದರ್ಜೆ ಸಹಾಯಕ ಸಾಗರ್ ಬಾಬು, ಮೊ: 8861295034 ನೋಡಲ್ ಅಧಿಕಾರಿಯಾಗಿದ್ದಾರೆ.
ವಾರ್ಡ್ ನಂ.10ರ ಅಶ್ವಥ್ ನಗರ, 11ರ ಸುಭಾಷ್ ನಗರ, 12ರ ಅಣ್ಣಾನಗರ, 13ರ ಭೂತನಗುಡಿ, 14ರ ಹೊಸಭೋವಿ ಕಾಲೋನಿ, 15ರ ಹೊಸಮನೆ ಬಲಭಾಗ ಮತ್ತು 16ರ ಗಾಂಧಿನಗರ ನಿವಾಸಿಗಳಿಗೆ ಹೊಸಮನೆ ಹಿಂದೂ ಮಹಾಸಭಾ ಗಣಪತಿ ಸಮುದಾಯ ಭವನದಲ್ಲಿ ಕೇಂದ್ರ ತೆರೆಯಲಾಗಿದೆ. ನೀರು ಸರಬರಾಜು ಸಹಾಯಕ ಮಹೇಶ್, ಮೊ: 9907784472 ನೋಡಲ್ ಅಧಿಕಾರಿಯಾಗಿದ್ದಾರೆ.
ಉಳಿದಂತೆ ಕರ್ನಾಟಕ ಒನ್ ಕೇಂದ್ರಗಳಾದ ಸಾಬ್ಜಾನ್ ಸ್ಟೋರ್ ಬಿಲ್ಡಿಂಗ್, ಬಿ.ಎಚ್ ರಸ್ತೆ, ಕರವಸೂಲಿಗಾರ ಜಯಂತಿ, ಮೊ: 9449349857 ನೋಡಲ್ ಅಧಿಕಾರಿಯಾಗಿದ್ದಾರೆ. ಐಜಾ ಡಿಜಿಟಲ್ ಸರ್ವಿಸ್, ತಾಲೂಕು ಕಛೇರಿ ಮುಂಭಾಗ, ಕರವಸೂಲಿಗಾರ ಡಿ.ಎಸ್ ಹೇಮಾಂತರ್, ಮೊ: 9620478689 ನೋಡಲ್ ಅಧಿಕಾರಿಯಾಗಿದ್ದಾರೆ. ಜೆಎಂಎಫ್ಸಿ ನ್ಯಾಯಾಲಯ ಮುಂಭಾಗ, ಕರವಸೂಲಿಗಾರ ಚೇತನ್ಕುಮಾರ್, ಮೊ: 9880566455 ನೋಡಲ್ ಅಧಿಕಾರಿಯಾಗಿದ್ದಾರೆ. ಮತ್ತು ಹೊಸಮನೆ ಮುಖ್ಯರಸ್ತೆ, ಶಿವಾಜಿ ಸರ್ಕಲ್ ಶ್ರೀ ವೆಂಕಟೇಶ್ವರ ಸೇವಾ ಕೇಂದ್ರ, ಕರವಸೂಲಿಗಾರ ರವಿಪ್ರಸಾದ್, ಮೊ: 9113254462 ನೋಡಲ್ ಅಧಿಕಾರಿಯಾಗಿದ್ದಾರೆ.
ಸಾರ್ವಜನಿಕರು ಸುಲಭವಾಗಿ ನೋಂದಾಯಿಸಿಕೊಳ್ಳುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಅರ್ಹ ಫಲಾನುಭವಿಗಳು ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗು ಸಂಪರ್ಕಗೊಂಡಿರುವ ಬ್ಯಾಂಕ್ ಖಾತೆ ವಿವರ ನೀಡುವ ಮೂಲಕ ಯಾವುದೇ ಶುಲ್ಕ ಭರಿಸದೆ ಯಾವುದೇ ಸಮಯದಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಪೌರಾಯುಕ್ತ ಮನುಕುಮಾರ್ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post