ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಸಾಕ್ಷತ್ ಬ್ರಹ್ಮ ದೇವರೇ ಬಂದು ಹೇಳಿದರೂ ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ಪುನರುಚ್ಛಾರ ಮಾಡಿದರು.
ಭದ್ರಾವತಿಯ #Bhadravathi ಸಿದ್ದಾರೂಢನಗರದ ಧರ್ಮಶ್ರೀ ಸಭಾಭವನದಲ್ಲಿ ಈಶ್ವರಪ್ಪ ಅಭಿಮಾನಿ ಬಳಗ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಈಗಲೂ ಪಕ್ಷದ ವರಿಷ್ಠರು ಈ ಕುರಿತಂತೆ ನನ್ನನ್ನು ಕರೆದು ಮಾತನಾಡಿ ಚರ್ಚಿಸಲು ಕರೆದರೆ, ಅದನ್ನು ನಿಮಗೆ ತಿಳಿಸಿ ಅವರ ಬಳಿ ಹೋಗಿ ಎಲ್ಲಾ ಪ್ರಶ್ನೆಗಳನ್ನು ಮುಂದಿಡುತ್ತೇನೆ. ಅವರು ಏನು ಹೇಳುತ್ತಾರೋ ನೋಡೋಣ ಎಂದರು.
ಬಿಜೆಪಿ ನನ್ನ ತಾಯಿ 35-40 ಆ ಪಕ್ಷದ ಸಿದ್ಧಾಂತಕ್ಕೆ ಕರ್ನಾಟಕ ರಾಜ್ಯದಲ್ಲಿ ಬಿಎಸ್’ವೈ #BSYediyurappa ಕುಟುಂಬ ರಾಜಕಾರಣದಿಂದ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಸಲುವಾಗಿ ನಾನು ಈ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತದ್ದೇನೆ ಹೊರತು ಎಂಪಿ, ಎಂಎಲ್’ಎ ಆಗುವ ಆಸೆಯಿಂದ ಅಲ್ಲ ಎಂದರು.

ಎಂಪಿಎಂ, ವಿಐಎಸ್’ಎಲ್ ಕುರಿತಂತೆ ನಾವು ನೀವೆಲ್ಲ ಅಣ್ಣ-ತಮ್ಮಂದಿರಂತೆ. ನಾವೆಲ್ಲಾ ಒಟ್ಟಾಗಿ ಕುಳಿತು ಚರ್ಚಿಸಿ ಮುಂದೆ ಏನು ಮಾಡುಬಹುದೆಂದು ನಿರ್ಧರಿಸೋಣ. ಭದ್ರಾವತಿ ಜನತೆ ನನಗೆ ಅಧಿಕ ಮತ ಹಾಕಿದರೆ ನಾನು ಗೆಲ್ಲುವುದು ಗ್ಯಾರಂಟಿ. ಆ ರೀತಿ ಕ್ಷೇತ್ರದ ಜನತೆ ನನಗೆ ಮತ ಹಾಕಿಯೇ ಹಾಕುತ್ತಾರೆಂಬ ಭರವಸೆ ನನಗಿದೆ ಎಂದರು.

ಹಾ. ರಾಮಪ್ಪ, ನಾರಾಯಣಪ್ಪ, ಮಂಜುನಾಥ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post