ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ವ್ಯಾಪ್ತಿಯ ಭದ್ರಾವತಿ ತಾಲ್ಲೂಕು ಹೊನ್ನಟ್ಟಿ ಹೊಸೂರು, ದೊಡ್ಡಗೊಪ್ಪೆನಹಳ್ಳಿ, ಕಾರೇಹಳ್ಳಿ, ಚಿಕ್ಕಗೊಪ್ಪೆನಹಳ್ಳಿ ಹಾಗೂ ತರೀಕೆರೆ ತಾಲ್ಲೂಕು ಹಲಸೂರು ಮತ್ತು ರಂಗೇನಹಳ್ಳಿ ಭಾಗದಲ್ಲಿ ನಡೆಯುತ್ತಿರುವ ಅಚ್ಚುಕಟ್ಟು ರಸ್ತೆ ಹಾಗೂ ಕಲ್ಲುಕಟ್ಟಡ ಕಾಮಗಾರಿಗಳನ್ನು ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.
ರೈತರಿಗೆ ಜಮೀನಿನ ದಿನ ನಿತ್ಯದ ಕೆಲಸ ಕಾರ್ಯಗಳನ್ನು ನಿರ್ವಹಣೆ ಮಾಡಲು ಅಚ್ಚುಕಟ್ಟಾಗಿರುವ ಅಚ್ಚುಕಟ್ಟು ರಸ್ತೆಗಳ ಅವಶ್ಯಕತೆಯಿದ್ದು, ಈ ದಿಶೆಯಲ್ಲಿ ಅವರಿಗೆ ಅನುಕೂಲವಾಗಲು ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ. ಅಧಿಕಾರಿಗಳು ರೂಪಿಸಿರುವ ಕ್ರಿಯಾ ಯೋಜನೆಯ ಯಥಾವತ್ ಕೆಲಸ ಮಾಡುವಂತೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ಗುದ್ದಲಿ ಪೂಜೆಯ ನಂತರವೂ ಕೆಲವು ಕಾಮಗಾರಿಗಳು ಆರಂಭಿಸದಿದ್ದ ಗುತ್ತಿಗೆದಾರರಿಗೆ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಹೇಳಲಾಯಿತು, ಅದಕ್ಕೂ ಜಗ್ಗದಿದ್ದರೆ ಮರು ಟೆಂಡರ್ ಕರೆಯುವಂತೆ ಸೂಚಿಸಿದರು.
ಕಾಮಗಾರಿಯಲ್ಲಿ ಎಳ್ಳಷ್ಟು ಲೋಪ ಕಂಡು ಬಂದರೆ ಅಂತಹ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದಂತೆ, ಕಪ್ಪು ಪಟ್ಟಿಗೆ ಸೇರಿಸುವಂತೆ ಅಧಿಕಾರಿಗಳಿಗೆ ಗುತ್ತಿಗೆದಾರರ ಸಮ್ಮುಖದಲ್ಲಿ ಎಚ್ಚರಿಕೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post