ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಸಫಾರಿ #Saffari ವೇಳೆ ಅತಿಯಾದ ವೇಗದ ವಾಹನ ಚಾಲನೆಗೆ ಚಿರತೆಯೊಂದು ಬಲಿಯಾಗಿರುವ #Leopard Death ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಲಕ್ಕವಳ್ಳಿ #Bhadra Tiger Reserve Lakkavalli ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರವಾಸಿಗರೊಬ್ಬರ ಹೇಳಿಕೆಯಿಂದ ಸತ್ಯ ಬಯಲಾಗಿದೆ.
ಘಟನೆ ಹಿನ್ನೆಲೆ:
ಫೆ.4ರಂದು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಲಕ್ಕವಳ್ಳಿ ವ್ಯಾಪ್ತಿಯಲ್ಲಿ ಚಿರತೆಯೊಂದು ಶವವಾಗಿ ಪತ್ತೆಯಾಗಿತ್ತು. ಫೆ.5ರಂದು ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಚಿರತೆ ಬೆನ್ನುಮೂಳೆ ಮುರಿದು ಹಸಿವಿನಿಂದ ಸಾವನ್ನಪ್ಪಿದೆ ಎಂದು ವರದಿ ನೀಡಲಾಯಿತು.
ಇದೇ ವೇಳೆ ಮೃತಪಟ್ಟ ಚಿರತೆಯ ಒಂದು ಕಣ್ಣು ಕುರುಡಾಗಿರುವುದು ಗಮನಕ್ಕೆ ಬಂದಿತ್ತು ಹಾಗೂ ಚಿರತೆ ಮರದಿಂದ ಬಿದ್ದು ಬೆನ್ನುಮೂಳೆ ಮುರಿದಿರಬೇಕು ಎಂದು ಶಿವಮೊಗ್ಗದ ಪಶುವೈದ್ಯರು ಅಭಿಪ್ರಾಯಪಟ್ಟಿದ್ದರು.
Also read: ಶಿವಮೊಗ್ಗ: ಭದ್ರಾವತಿಯ ವಿನಯ್ ಕುಮಾರ್’ಗೆ ಕುವೆಂಪು ವಿವಿ ಪಿಎಚ್‍ಡಿ
ಹಿರಿಯ ಅರಣ್ಯ ಅಧಿಕಾರಿಯ ಪ್ರಕಾರ, ಚಿರತೆ ಕುಂಟುತ್ತಿರುವುದನ್ನು ಗಮನಿಸಲಾಯಿತು ಮತ್ತು ಗಾಯದ ಗುರುತುಗಳನ್ನು ಖಚಿತಪಡಿಸಿಕೊಳ್ಳಲು ತಂಡವು ಅದರ ಚಲನವಲನವನ್ನು ಪತ್ತೆಹಚ್ಚಿತ್ತು ಎನ್ನಲಾಗಿದೆ.
ಆದರೆ ಅಸಲಿ ಸತ್ಯವೇ ಬೇರೆ ಇತ್ತು ಎಂಬುದು ಈಗ ಪ್ರವಾಸಿಗರು ಬಹಿರಂಗಪಡಿಸಿದ್ದು, ಫೆಬ್ರವರಿ 1 ರಂದು ಸಂಜೆ ಸಫಾರಿ ವೇಳೆ ಚಿರತೆ ಜೀಪ್‌ಗೆ ಡಿಕ್ಕಿ ಹೊಡೆದು ಗಾಯಗೊಂಡಿತ್ತು. ಈ ವಿಷಯವನ್ನು ಯಾರಿಗೂ ಹೇಳದಂತೆ ಪ್ರವಾಸಿಗರನ್ನು ಕೇಳಲಾಯಿತು. ಆದರೆ ಚಿರತೆ ಸಾವಿಗೀಡಾಗಿದ್ದಕ್ಕೆ ಮನನೊಂದಿದ್ದ ಅವರಲ್ಲೊಬ್ಬರು ಇದೀಗ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ಘಟನೆ ಬಗ್ಗೆ ಅರಣ್ಯ ಸಂರಕ್ಷಣಾಧಿಕಾರಿ ಸೌರಭಕುಮಾರ್ ಮಾತನಾಡಿ, ಸಾವಿಗೆ ನಿಜವಾದ ಕಾರಣವನ್ನು ತನಿಖೆ ಮಾಡುವಂತೆ ಹಾಗೂ ಅಪಘಾತದ ಬಗ್ಗೆ ಸಾಕ್ಷ್ಯ ಸಿಕ್ಕರೆ ಸಫಾರಿ ನಿರ್ವಾಹಕರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಸಫಾರಿ ಪ್ರವಾಸೋದ್ಯಮಕ್ಕೆ ಅತಿಯಾದ ಚಿರತೆ ಬಲಿಯಾಗಿದ್ದು, ಪ್ರವಾಸಿಗರು/ ರೆಸಾರ್ಟ್ ಗ್ರಾಹಕರನ್ನು ಮೆಚ್ಚಿಸುವ ಉತ್ಸುಕತೆಯಲ್ಲಿ, ಚಾಲಕರು ಕೆಲವೊಮ್ಮೆ ವನ್ಯಜೀವಿಗಳ ಆವಾಸಸ್ಥಾನಗಳಲ್ಲಿ ವೇಗವನ್ನು ಹೆಚ್ಚಿಸುತ್ತಾರೆ. ಇದರಿಂದ ಅಪಘಾತಗಳು ಸಂಭವಿಸುತ್ತವೆ. ಆದರೆ ಇಂತಹ ಸೂಕ್ಷ್ಮ ವಲಯಗಳಲ್ಲಿ ಜಾಗರೂರಕರಾಗಿ ವಾಹಕ ಚಾಲನೆ ಮಾಡಬೇಕು ಎನ್ನುವುದನ್ನು ಸಫಾರಿ ಆಪರೇಟರ್ ಅರ್ಥಮಾಡಿಕೊಳ್ಳಬೇಕು. ಈಗ ಅರಣ್ಯ ಇಲಾಖೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post