ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರದ ಜೀವನಾಡಿಯಾಗಿರುವ ವಿಐಎಸ್’ಎಲ್ #VISL ಕಾರ್ಖಾನೆಯನ್ನು ಉಳಿಸುವಲ್ಲಿ ಸಂಸದ ಬಿ.ವೈ. ರಾಘವೇಂದ್ರ #BYRaghavendra ಅವರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ #BKSangameshwar ಒತ್ತಾಯಿಸಿದ್ದಾರೆ.
ಗುತ್ತಿಗೆ ಕಾರ್ಮಿಕರು ವಿಐಎಸ್’ಎಲ್ ಕಾರ್ಖಾನೆ ಮುಂಭಾಗದಿಂದ ಅಂಡರ್ ಬ್ರಿಡ್ಜ್’ವರೆಗೂ ಹಮ್ಮಿಕೊಂಡಿದ್ದ ಬೃಹತ್ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಗರಸಭಾ ಸದಸ್ಯ ಬಿ.ಕೆ. ಮೋಹನ್ ಮಾತನಾಡಿ, ಸಂಸದ ರಾಘವೇಂದ್ರ ಅವರು ದಯಮಾಡಿ ಕಾರ್ಖಾನೆಯನ್ನು ಉಳಿಸಿಕೊಡಲು ಪ್ರಯತ್ನಿಸಬೇಕು. ಚುನಾವಣೆಗೂ ಮುನ್ನ ಈ ಕುರಿತ ಮಹತ್ವದ ತೀರ್ಮಾನ ಕೈಗೊಳ್ಳಿ ಎಂದು ಮನವಿ ಮಾಡಿದರು.
ಭದ್ರಾವತಿಯ ಎರಡು ಕಣ್ಣುಗಳಾದ ಎಂಪಿಎಂ ಹಾಗೂ ವಿಐಎಸ್’ಎಲ್ ಕಾರ್ಖಾನೆಗಳಿಗೆ ಬಂಡವಾಳ ತೊಡಗಿಸಿ, ಮರು ಆರಂಭಿಸಲು ಕೇಂದ್ರದ ಮೇಲೆ ಒತ್ತಡ ಹೇರಿ. ನೀವು ಮೂರು ಬಾರಿ ಗೆದ್ದಿದ್ದೀರಿ, ನಾವೂ ಸಹ ಮೂರು ಬಾರಿ ಗೆದ್ದಿದ್ದೇವೆ. ಹೀಗಾಗಿ, ಕಾರ್ಖಾನೆಗಳನ್ನು ಉಳಿಸಿ, ಊರನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದಿದ್ದಾರೆ.

ಪಂಜಿನ ಮೆರವಣಿಗೆ ವಿಐಎಸ್’ಎಲ್ ಕಾರ್ಖಾನೆ ಮುಂಭಾಗದಿಂದ ಹೊರಟು ಹೊಸ ಸೇತುವೆ ರಸ್ತೆ, ರಂಗಪ್ಪ ವೃತ್ತ, ಮಾಧವಾಚಾರ್ ವೃತ್ತದ ಮೂಲಕ ಹಾದು ಅಂಡರ್ ಬ್ರಿಡ್ಜ್ ಬಳಿ ಅಂತ್ಯಗೊಂಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post