ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ರೈಲ್ವೆ ಹಳಿಗಳು ಏರುಪೇರಾಗಿ ಬೆಂಗಳೂರಿನಿಂದ ಬಂದ ರೈಲು ಭದ್ರಾವತಿ #Bhadravathi ನಿಲ್ದಾಣದಲ್ಲಿ ನಿಂತಿದ್ದು, ಇತ್ತ ಶಿವಮೊಗ್ಗದಿಂದ – ಬೆಂಗಳೂರು #Bengaluru ಹೊರಟಿರುವ ಜನಶತಾಬ್ದಿ ರೈಲು ಶಿವಮೊಗ್ಗದಲ್ಲೇ #Shivamogga ನಿಂತಿರುವ ಘಟನೆ ನಡೆದಿದ್ದು ಪ್ರಯಾಣಿಕರು ಕಂಗಾಲಾಗಿದ್ದರು.
ಬುಧವಾರ ರಾತ್ರಿ ಭದ್ರಾವತಿ ರೈಲ್ವೆ ಅಂಡರ್’ಪಾಸ್ #Underpass ಬಳಿ ದೊಡ್ಡ ವಾಹನವೊಂದು ಹೋಗುವಾಗ ರೈಲ್ವೆ ಹಳಿ ಸುರಕ್ಷತೆಗಾಗಿ ಹಾಕಿದ್ದ 4 ಮೀಟರ್ ಎತ್ತರದ ಬ್ಯಾರಿಕೇಡ್ ಅನ್ನು ಮುರಿದಿದೆ.

ಡಿಕ್ಕಿ ರಭಸಕ್ಕೆ ರೈಲ್ವೆ ಹಳಿಗಳು ಒಂದು ಅಡಿಯಷ್ಟು ಏರುಪೇರಾಗಿತ್ತು. ವಿಷಯ ತಿಳಿದ ರೈಲ್ವೆ ಇಲಾಖೆ ಸಿಬ್ಬಂದಿ ಮಧ್ಯ ರಾತ್ರಿಯಿಂದ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ.

ಇನ್ನು, ಶಿವಮೊಗ್ಗ – ಭದ್ರಾವತಿ ನಡುವೆ ರೈಲು ಸಂಚಾರ ರದ್ದುಗೊಳಿಸಲಾಗಿತ್ತು.
ವಾಹನವೊಂದರ ಎಡವಟ್ಟಿನಿಂದ ಸಾವಿರಾರು ಪ್ರಯಾಣಿಕರು ಕಾದು ಕಾದು ಸುಸ್ತಾಗಿ ಹಿಡಿಶಾಪ ಹಾಕುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post