ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ವಿಯೆಟ್ನಾಂ ದೇಶದ ವೋಚಿಮಿನ್ ನಗರದಲ್ಲಿ ಜೂನ್ 7 ರಂದು ನಡೆದ 2 ಎರಡನೇ ಅಂತರರಾಷ್ಟ್ರೀಯ ಯೋಗ #Yoga ಸಮ್ಮೇಳನ ಮತ್ತು ಯೋಗ ಟ್ಯಾಲೆಂಟ್ ಶೋ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಯೋಗ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ, ಅಂತರಾಷ್ಟ್ರೀಯ ಯೋಗ ಶಿಕ್ಷಕ ಹಾಗೂ ಅಂತರಾಷ್ಟ್ರೀಯ ಯೋಗ ತೀರ್ಪುಗಾರರಾದ ಎಂ.ಕೆ. ಹಿರೇಮಠ ರವರಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಯೋಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Dr. ವಿಪ್ರ ಪಾಂಡೆ ಕನ್ಸಲ್ಟೆಂಟ್ ಜನರಲ್ ಆಫ್ ಇಂಡಿಯಾ ಇವರ ಸಮ್ಮುಖದಲ್ಲಿ ವಿಯಟ್ನಾಂ’ನ ವಿ ಯೋಗ ವರ್ಲ್ಡ್ ಸಂಸ್ಥೆಯ ಸಂಸ್ಥಾಪಕ ಹಾಗೂ C.E.O. ಯೋಗಾಚಾರ್ಯ ವಿಶ್ವನಾಥ್ ಕುಲಕರ್ಣಿ ಹಾಗೂ AVIYA ಭಾರತದ ಯೋಗಾಚಾರ್ಯ ವೈದ್ಯ ತೀರ್ಥರಾಜ್ ಹೋಲೂರ್ ಪ್ರಶಸ್ತಿ ಪ್ರಧಾನ ಮಾಡಿದರು.
ದೇಶಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದ ಎಂ.ಕೆ. ಹಿರೇಮಠ ರವರಿಗೆ ತಂದೆ ಕುಮಾರಸ್ವಾಮಿ ಮಲ್ಲಯ್ಯ ಹಿರೇಮಠ (ವಿ ಐ ಎಸ್ ಎಲ್ ನ ನಿವೃತ್ತ ನೌಕರ), ತಾಯಿ ಚಂದ್ರಾ ಹಿರೇಮಠ, ವಿಯೆಟ್ನಾo, ಆಸ್ಟ್ರೇಲಿಯಾ, ಕೊಂಬೋಡಿಯ, ಭಾರತ ಹಾಗೂ ವಿವಿಧ ದೇಶಗಳ ಯೋಗ ವಿದ್ವಾಂಸರು, ಶಿಕ್ಷಕರು, ಯೋಗ ತೀರ್ಪುಗಾರರು, ಯೋಗ ಪಟುಗಳು ಶುಭ ಹಾರೈಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















