ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ ವಾರ್ತೆ ಅತೀವ ದುಃಖ ತಂದಿದೆ ಎಂದು ಶಾಸಕ ಬಿ. ಕೆ. ಸಂಗಮೇಶ್ವರ್ ಹೇಳಿದ್ದಾರೆ.
ಬಾಲ್ಯದಲ್ಲೇ ಚಿತ್ರರಂಗಕ್ಕೆ ಆಗಮಿಸಿ ಬಾಲನಟನಾಗಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದ ಅವರ ಚಲನಚಿತ್ರಗಳು ಸಂಸಾರ ಸಹಿತ ನೋಡುವಂತಹ ಸಿನಿಮಾಗಳಾಗಿದ್ದವು.
ಇವರ ಇತ್ತೀಚಿನ ಚಿತ್ರ ರಾಜಕುಮಾರ, ಮಹಿಳೆಯರಾದಿಯಾಗಿ ಎಲ್ಲಾ ವಯೋಮಾನದವರಲ್ಲೂ ಮನತುಂಬಿತ್ತು. ಅವರ ಸರಳತೆ, ವಿನಯತೆ ನಡೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಇಂದು ಇವರ ನಿಧನ ಸುದ್ಧಿ ಕೇಳಿ ಅತೀವ ದುಃಖ ಉಂಟಾಗಿದೆ. ದೇವರು ಇವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ ಸಂತಾಪ :
ನಗರದ ಬಿ.ಎಚ್ ರಸ್ತೆ ಚಾಮೇಗೌಡ ಏರಿಯಾ ರೈಲ್ವೆ ನಿಲ್ದಾಣದ ಬಳಿ ಇರುವ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ನೃಪತುಂಗ ಆಟೋ ನಿಲ್ದಾಣದಲ್ಲಿ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ನಗರಸಭಾ ಸದಸ್ಯ ಜಾರ್ಜ್ ನೇತೃತ್ವದಲ್ಲಿ ಸಂಘದ ಪ್ರಮುಖರು ಹಾಗು ಸ್ಥಳೀಯರು ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸೂಚಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post