ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಇಂದು ದೇಶದಲ್ಲಿ ಕೋವಿಡ್-19 ಖಾಯಿಲೆ ಹರಡುತ್ತಿದ್ದು, ಅದರ ಬಗ್ಗೆ ಭಯ ಬೀಳದೆ ಮುನ್ನೇಚ್ಚರಿಕೆ ವಹಿಸಿದರೆ ಯಾವುದೆ ತೊಂರೆಯಿಲ್ಲ. ಇದಕ್ಕೆ ಆಯುರ್ವೇದಿಕ್ ಕಿಟ್ ಉಚಿತವಾಗಿ ಸಾರ್ವಜನಿಕವಾಗಿ ನೀಡುವ ಕಾರ್ಯಕ್ಕೆ ತಾವು 10 ಲಕ್ಷ ರೂಗಳ ವೈಯುಕ್ತಿಕ ದೇಣಿಗೆ ನೀಡುವುದಾಗಿ ಶಾಸಕ ಬಿ.ಕೆ. ಸಂಗಮೇಶ್ವರ ತಿಳಿಸಿದರು.
ಟಿಎಂಎಇಎಸ್ ಆಯುರ್ವೇದಿಕ್ ಕಾಲೇಜ್ ವತಿಯಿಂದ ನಗರಸಭೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಆಯುರ್ವೇದಿಕ್ ಇಮ್ಯೂನಿಟಿ ಬೂಷ್ಟರ್ ಕಿಟ್‌ನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಆಯುರ್ವೇದ ಎಂಬುದು ನಮ್ಮ ದೇಶದ ಋಷಿ ಮುನಿಗಳು ನೀಡಿದ ಕೊಡುಗೆಯಾಗಿದೆ. ಇದರಿಂದ ಯಾವುದೇ ರೀತಿಯ ಪಾರ್ಶ್ವ ಪರಿಣಾಮ ಇರುವುದಿಲ್ಲ. ಇದಕ್ಕೆ ಉದಾಹರಣೆಯಾಗಿ ಕೇರಳ ರಾಜ್ಯದಲ್ಲಿ ಕೋವಿಡ್ -19 ಖಾಯಿಲೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿರುವುದೆ ಸಾಕ್ಷಿಯಾಗಿದೆ. ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡರೆ ಉತ್ತಮ ಆರೋಗ್ಯದಿಂದ ಜೀವಿಸಲು ಸಾಧ್ಯ ಎಂದರು.
ನಗರಸಭೆ ಆಯುಕ್ತ ಮನೋಹರ್ ಮಾತನಾಡಿ, ಟಿಎಂಎಇಎಸ್ ಕಾಲೇಜು ಆಯುರ್ವೇದಿಕ್ ಕಿಟ್ ವಿತರಿಸುತ್ತಿರುವುದು ಶ್ಲಾಘನೀಯ. ಇದಕ್ಕೆ ನಗರಸಭೆ ವತಿಯಿಂದ 15 ಲಕ್ಷ ರೂ ಗಳನ್ನು ನೀಡುವುದಾಗಿ ತಿಳಿಸಿದರು.
ತಹಶೀಲ್ದಾರ್ ಶಿವಕುಮಾರ್ ಹಾಗು ಸಬ್ ರಿಜಿಸ್ಟಾರ್ ಲಕ್ಷ್ಮೀಕಾಂತ್, ಆಯುವೇದ ಕಾಲೇಜಿನ ಆಡಳಿತಾಧಿಕಾರಿ ಜಿ. ಹಿರೇಮಠ್, ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಉಪ ಪ್ರಾಂಶುಪಾಲ ಡಾ.ಟಿ.ಸಿ. ವಿನಯ್ ಆಯುರ್ವೇದ ಕಿಟ್ ಬಗ್ಗೆ ಮಾಹಿತಿ ನೀಡಿದರು. ಸಂತೋಷ್ ಕುಮಾರ್ ಸ್ವಾಗತಿಸಿದರು. ಡಾ.ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು. ಡಾ.ನಳಿನಾ ವಂದಿಸಿದರು.
Get In Touch With Us info@kalpa.news Whatsapp: 9481252093
Discussion about this post