ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕಳೆದ ನಾಲ್ಕು ದಿನಗಳ ಹಿಂದೆ ಲಾಕಡೌನ್ ವೇಳೆಯಲ್ಲಿ ಪೌರಕಾರ್ಮಿಕನ ಹತ್ಯೆ ಹಿನ್ನೆಲೆಯಲ್ಲಿ ಹಳೆ ನಗರ ಸಬ್ ಇನ್ಸ್‌ಪೆಕ್ಟ್‌ರ್ ಆರ್. ಶ್ರೀನಿವಾಸ್ ಅವರನ್ನು ಅಮಾನತ್ತು ಮಾಡಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಐಜಿ, ಶ್ರೀನಿವಾಸ್ ಅವರ ಅಮಾನತ್ತಿಗೆ ಸೂಚಿಸಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲೇ ಕ್ಷುಲ್ಲಕ ಕಾರಣಕ್ಕೆ ಪೌರಕಾರ್ಮಿಕನನ್ನು ಹತ್ಯೆ ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೆನಗರ ಠಾಣೆ ಎಸ್‌ಐ ಶ್ರೀನಿವಾಸ್ ಅವರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿಲ್ಲ ಹಾಗೂ ಸರಿಯಾದ ರೀತಿಯಲ್ಲಿ ಹೇಳಿಕೆ ನೀಡದೆ ಕರ್ತವ್ಯ ಲೋಪ ಮಾಡಿರುವುದೇ ಅಮಾನತ್ತಿಗೆ ಕಾರಣವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post