ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಅಖಿಲ ಕರ್ನಾಟಕ ವನ್ನಿಯಕುಲ ಕ್ಷತ್ರಿಯವನ್ನಿಯರ್ ಸಮಾಜವನ್ನು ರಾಜ್ಯದಾದ್ಯಂತ ಬಲವಾಗಿ ಸಂಘಟಿಸುವ ಕುರಿತಾಗಿ ಸಂಘದ ಸಭೆಯಲ್ಲಿ ಸಂಕಲ್ಪ ಮಾಡಲಾಯಿತು.
ಈ ಕುರಿತಂತೆ ಅಖಿಲ ಕರ್ನಾಟಕ ವನ್ನಿಯಕುಲ ಕ್ಷತಿಯ ವನ್ನಿಯರ್ ಸಂಘದ ಪೂರ್ವಭಾವಿ ಸಭೆಯನ್ನು ನಗರದಲ್ಲಿ ನಡೆಸಲಾಯಿತು.
ರಾಜ್ಯದಾದ್ಯಂತ ಸಮಾಜವನ್ನು ಹಾಗೂ ಸಮಾಜದ ಜನರನ್ನು ಸಂಘಟಿಸಬೇಕು, ಈ ಸಮಾಜದಲ್ಲಿರುವ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಕುರಿತಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಸಂಘದ ಹಂಗಾಮಿ ಅಧ್ಯಕ್ಷರು ರವಿ ಗೌಂಡರ್ ಹಾಗೂ ರಾಜ್ಯ ಸಂಘಟನಾ ಕರ್ಯಾದರ್ಶಿ ಶಂಕರ್ ಗೌಂಡರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post