ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಾಲೂಕಿನ ಹೊಸ ಸಿದ್ದಾಪುರ ಬಡಾವಣೆಯಲ್ಲಿ ಭಾನುವಾರ ಸಂಜೆ 8 ಜನರ ಯುವಕರ ಗುಂಪೊಂದು ಗಾಂಜಾ ಮತ್ತಿನಲ್ಲಿ ಕಟಿಂಗ್ ಶಾಪ್ ಬಳಿ ನಿಂತಿದ್ದ ಇಬ್ಬರು ಯುವಕರಿಗೆ ಮನಬಂದಂತೆ ಹಲ್ಲೆ ಮಾಡಿದ್ದು, ಇದನ್ನು ಬಿಡಿಸಲು ಮುಂದಾದ ಕೌನ್ಲಿರಲ್ ಅವರ ಮಾವನವರ ಮೇಲೂ ಸಹ ಹಲ್ಲೆ ಮಾಡಿದ್ದಾರೆ.
ಗಾಂಜಾ ಮತ್ತಿನಲ್ಲಿದ್ದ ಯುವಕರು ಏಕಾಏಕಿ ಈ ಹಲ್ಲೆ ನಡೆಸಿದ್ದು, ಸಾರ್ವಜನಿಕರಲ್ಲಿ ಕೆಲ ಕಾಲ ಆತಂಕ ಸೃಷ್ಠಿಸಿತ್ತು. ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ರಸ್ತೆ ತಡೆ ನಡೆಸಿ ಹಲ್ಲೆಕೋರರನ್ನು ಬಂಧಿಸುವಂತೆ ಒತ್ತಾಯಿಸಿದರು.
ಸುಮಾರು ಗಂಟೆಗೂ ಹೆಚ್ಚು ಕಾಲ ರಸ್ತೆ ಬಂದ್ ಮಾಡಿ ಪೊಲೀಸರ ವೈಫಲ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಹೊಸಸಿದ್ದಾಪುರದಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದ್ದು ಈ ಹಿಂದೆ ಅನೇಕ ಬಾರಿ ಸಾರ್ವಜನಿಕರ ಮೇಲೆ ಹಲ್ಲೆ ಮಾಡಲಾಗಿದೆ. ಶಾಂತಿಯಿಂದ ಗ್ರಾಮದಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಪ್ರಶ್ನೆ ಮಾಡುವವರ ಮೇಲೆ ಹಲ್ಲೆ, ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡುವ ಪ್ರಕ್ರಿಯೆ ಹೆಚ್ಚಾಗಿದೆ. ಮರ್ಯಾದೆ, ಭಯಕ್ಕೆ ಅಂಜಿ ಎಷ್ಟೋ ಜನ ದೂರು ನೀಡುತ್ತಿಲ್ಲ. ಚಿಕ್ಕಚಿಕ್ಕ ಹುಡುಗರೇ ಗಾಂಜಾ ವ್ಯಸನಕ್ಕೆ ಒಳಗಾಗಿದ್ದು ಸಾರ್ವಜನಿಕರ ತಲೆ ತಗ್ಗಿಸುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಪೊಲೀಸರು ಹಲ್ಲೆಕೋರರನ್ನು ಬಂಧಿಸಿ, ಗಾಂಜಾ ಹಾವಳಿ ತಡೆಗಟ್ಟದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಮಾಜಿ ಕೌನ್ಸಿಲರ್ ಅನಿಲ್ ಕುಮಾರ್ ಸೇರಿ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನ್ಯೂಟೌನ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಹಳೇ ನಂಜಾಪುರದ ವಿನೋದ್, ರಾಜೇಶ್ ಹಲ್ಲೆಗೆ ಒಳಗಾದವರು. ತೀವ್ರ ಹಲ್ಲೆಗೆ ಒಳಗಾದ ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post