ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಹಿಂದೂ ಧರ್ಮ ರಕ್ಷಣೆಗಾಗಿ ನಿರಂತರವಾಗಿ ಹೋರಾಡುತ್ತಿರುವ ಬಜರಂಗದಳದ ಭೂತನಗುಡಿ ಘಟಕ ನೂತನವಾಗಿ ಅಸ್ಥಿತ್ವಕ್ಕೆ ಬಂದಿದ್ದು, ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ನಿನ್ನೆ ಭೂತನಗುಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಘಟಕ ಅಸ್ಥಿತ್ವಕ್ಕೆ ಬಂದಿದ್ದು, ಪದಾಧಿಕಾರಿಗಳ ಯುವ ಪಡೆ ಜವಾಬ್ದಾರಿ ಹೊತ್ತಿದೆ.
ತಾಲೂಕು ಬಜರಂಗದಳ ಸಹಸಂಯೋಜಕರಾಗಿ ಸವಾಯ್ ಸಿಂಗ್, ನಗರ ಗೋ ರಕ್ಷಾ ಪ್ರಮುಖ್ ಆಗಿ ಶ್ರೀಕಾಂತ್, ನೇತಾಜಿ ಬೂತನಗುಡಿ ಘಟಕದ ಸಂಚಾಲಕ ರೋಹಿತ್ ಶಿವಾಜಿ, ನಗರ ಸಹ ಸಂಯೋಜಕರಾಗಿ ಸಂಜಯ್, ತಾಲೂಕು ಸಹಸಂಯೋಜಕರಾಗಿ ರಂಗನಾಥ್, ಅವರುಗಳನ್ನು ನಿಯೋಜನೆ ಮಾಡಲಾಗಿದೆ.
ವೇದಿಕೆ ಕಾರ್ಯಕ್ರಮದಲ್ಲಿ ಪ್ರಮುಖರಾದ ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ವೆಂಕಟೇಶ್, ಚಿಂಚೇನಳ್ಳಿ ಕುಮಾರ್, ಬಂಕ್ ಕುಮಾರ್, ಬಜರಂಗದಳ ಜಿಲ್ಲಾ ಸಂಯೋಜಕ ಸುನಿಲ್ ಕುಮಾರ್, ತಾಲೂಕು ಸಂಯೋಜನ ವಡಿವೇಲು, ನಗರ ಸಂಚಾಲಕ ಕೃಷ್ಣ ಇದ್ದರು.
ಘಟಕದ ಉದ್ಘಾಟನೆ ಹಿನ್ನೆಲೆಯಲ್ಲಿ ಭೂತನಗುಡಿ ಪ್ರದೇಶ ಕೇಸರಿಮಯವಾಗಿತ್ತು. ಇಡಿಯ ಪ್ರದೇಶದಲ್ಲಿ ಕೇಸರಿ ಬಾವುಟ ಹಾಗೂ ವಸ್ತ್ರಗಳನ್ನು ಕಟ್ಟಿ ಇಡಿಯ ಪ್ರದೇಶಕ್ಕೆ ಹೊಸ ಮೆರುಗು ನೀಡಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post