ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತರೀಕೆರೆ ರಸ್ತೆಯ ಇಂಡಿಯನ್ ಓವರ್’ಸೀಸ್ ಬ್ಯಾಂಕ್ ಹಿಂಬದಿಯಲ್ಲಿರುವ ಕನ್ಸರ್’ವೆನ್ಸಿ ಜಾಗದಲ್ಲಿ ಸುಮಾರು 44 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಟು ವೀಲರ್ ಪಾರ್ಕಿಂಗ್ ನಿರ್ಮಿಸಲು ನಗರಸಭೆ ಉದ್ದೇಶಿಸಿದೆ.
ಬಜೆಟ್ ಭಾಷಣದಲ್ಲಿ ಈ ವಿಚಾರವನ್ನು ತಿಳಿಸಿರುವ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ನಗರ ಭೂ ಸಾರಿಗೆ ನಿರ್ದೇಶನಾಲಯ ಇಲಾಖೆ ವತಿಯಿಂದ ತರೀಕೆರೆ ರಸ್ತೆಯ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಹಿಂಬದಿಯಲ್ಲಿರುವ ಕನ್ಸರ್ವೆನ್ಸಿ ಜಾಗದಲ್ಲಿ ಸುಮಾರು ರೂ. 44.00 ಲಕ್ಷ ಅನುದಾನದಲ್ಲಿ ಸುಸಜ್ಜಿತ ದ್ವಿಚಕ್ರ ವಾಹನ ನಿಲ್ದಾಣ ನಿರ್ಮಾಣ ಕಾಮಗಾರಿ ನಡೆಯಲಿದೆ ಎಂದರು.

ಬಿಎಚ್ ರಸ್ತೆ ಪದ್ಮನಿಲಯ ಹೋಟೆಲ್’ನಿಂದ ಹಳೇ ಸೇತುವೆ ಸ್ವಸ್ತಿಕ್ ಹಾರ್ಡ್’ವೇರ್’ವರೆಗೆ ರಸ್ತೆಯ ಎರಡು ಬದಿಯಲ್ಲಿ ಸುಮಾರು ರೂ 315.00 ಲಕ್ಷಗಳ ಅನುದಾನದಲ್ಲಿ ಪುಟ್ ಪಾತ್ (ಪಾದಚಾರಿ ಮಾರ್ಗ) ಅಭಿವೃದ್ಧಿ ಕಾಮಗಾರಿ ಮತ್ತು ಕೆಎಸ್’ಆರ್’ಟಿಸಿ ಡಿಪೋ ವೃತ್ತದಿಂದ ಹೊಸ ಸೇತುವೆವರೆಗೆ ರಸ್ತೆಯ ಎರಡು ಬದಿಯಲ್ಲಿ ಸುಮಾರು ರೂ 238.00 ಲಕ್ಷಗಳ ಅನುದಾನದಲ್ಲಿ ಪುಟ್ ಪಾತ್ (ಪಾದಚಾರಿ ಮಾರ್ಗ) ಅಭಿವೃದ್ಧಿ ಕಾಮಗಾರಿ ಮಂಜೂರಾತಿ ದೊರೆತಿದ್ದು, ಅನುಷ್ಠಾನ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post