ಕಲ್ಪ ಮೀಡಿಯಾ ಹೌಸ್ | ಹೊಳೊಹೊನ್ನೂರು |
ಇಲ್ಲಿನ ಮಲ್ಲಿಗೆ ನಗರದಲ್ಲಿ ಭಾರೀ ಮಳೆಯಿಂದಾಗಿ ಹಲವು ಮನೆಗಳು ಕುಸಿಯುವ ಭೀತಿಯಲ್ಲಿದ್ದು, ಇಲ್ಲಿದ್ದವರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
Also Read: ಸೋಮಿನಕೊಪ್ಪ ಕೆರೆಯ ನಡುಗಡ್ಡೆಯಲ್ಲಿ ಸಿಲುಕಿದ್ದ ಕುದುರೆಗಳ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಮಲ್ಲಿಗೆ ನಗರದಲ್ಲಿನ ಸುಮಾರು ಆರು ಮನೆಗಳಿಗೆ ಮಳೆ ನೀರು ಭಾರೀ ಪ್ರಮಾಣದಲ್ಲಿ ನುಗ್ಗಿದ್ದು ಹಾಗೂ ನಿರಂತರಾಗಿ ಸುರಿದ ಮಳೆಯಿಂದ ಮನೆಗಳ ಗೋಡೆಗಳು ತೇವಗೊಂಡಿವೆ. ಅಲ್ಲದೇ, ಇವು ಹಳೆಯ ಕಟ್ಟಡವಾದ್ದರಿಂದ ಕುಸಿತ ಭೀತಿಯೂ ಸಹ ಇದೆ. ಈ ಹಿನ್ನೆಲೆಯಲ್ಲಿ ಅಪಾಯ ಸ್ಥಿತಿಯಲ್ಲಿದ್ದ ಆರು ಕುಟುಂಬಗಳ ಸುಮಾರು 30 ಮಂದಿಯನ್ನು ಇಲ್ಲಿನ ಬಿಸಿಎಂ ಹಾಸ್ಟೆಲ್’ಗೆ ಸ್ಥಳಾಂತರ ಮಾಡಲಾಗಿದೆ.
Also Read: ಭದ್ರಾವತಿಯ ಮಾವಿನಕೆರೆ ಸರ್ಕಾರಿ ಶಾಲೆಗೆ ಶೇ.100 ರಷ್ಟು ಫಲಿತಾಂಶ
ಈ ಹಾಸ್ಟೆಲ್’ನಲ್ಲಿ ತಾತ್ಕಾಲಿಕವಾಗಿ ಪುನರ್ವಸತಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಇಲ್ಲಿಗೆ ಸ್ಥಳಾಂತರಗೊಂಡಿರುವವರಿಗೆ ಆಹಾರ ವ್ಯವಸ್ಥೆಯೊಂದಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ.
ಭದ್ರಾವತಿ ತಹಶೀಲ್ದಾರ್ ಪ್ರದೀಪ್ ಹಾಗೂ ಸ್ಥಳೀಯ ಅಧಿಕಾರಿಗಳು ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















