ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಬೊಮ್ಮನಕಟ್ಟೆ ಬಳಿಯಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದ ಗೋಮಾಂಸವನ್ನು ವಶಕ್ಕೆ ಒಡೆಯಲಾಗಿದ್ದು, ಇದರೊಂದಿಗೆ ಕಸಾಯಿಖಾನೆಗೆ ಸಾಗಿಸುವ ಉದ್ದೇಶದಿಂದ ಕೂಡಿ ಹಾಕಿದ್ದ ಹಸುಗಳನ್ನು ರಕ್ಷಣೆ ಮಾಡಲಾಗಿದೆ.
ಗೌ ಗ್ಯಾಸ್ ಫೌಂಡೇಷನ್ ಸ್ವಯಂ ಸೇವಕ ಮಂಜುನಾಥ್ ಎನ್ನುವವರಿಗೆ ದೊರೆತ ಮಾಹಿತಿಯ ಅನ್ವಯ ಕಾರ್ಯಕರ್ತರೊಂದಿಗೆ ಇಂದು ಮುಂಜಾನೆ ಸ್ಥಳಕ್ಕೆ ತೆರಳಿ ಗೋಮಾಂಸ ವಶಕ್ಕೆ ಪಡೆದು ಹಾಗೂ ಅಕ್ರಮವಾಗಿ ಕೂಡಿ ಹಾಕಲಾಗಿದ್ದ 5ಕ್ಕೂ ಅಧಿಕ ರಾಸುಗಳನ್ನು ಪೊಲೀಸರೊಂದಿಗೆ ರಕ್ಷಿಸಿದ್ದಾರೆ.
ಈ ಕುರಿತಂತೆ ಮಂಜುನಾಥ್ ಅವರು ಪೇಪರ್ ಟೌನ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಎಫ್’ಐಆರ್ ಸಹ ದಾಖಲಾಗಿದೆ.
ಇದರಂತೆ, ಬೊಮ್ಮನಕಟ್ಟೆ ಗ್ರಾಮದ ಸರ್ಕಲ್’ನಿಂದ ತಿಮ್ಮಾಪುರ ರಸ್ತೆಗೆ ಹೋಗುವ ರಸ್ತೆಯ ಕೆಲವು ಬೀದಿಯ ಮನೆಗಳಲ್ಲಿ ಗೋಮಾಂಸದ ಮಳಿಗೆಗಳು ಹಾಗೂ ವಧೆ ಮಾಡುವ ಉದ್ದೇಶದಿಂದ ಕೂಡಿ ಹಾಕಲಾಗಿದ್ದ ೫ಕ್ಕೂ ಅಧಿಕ ದನಕರುಗಳು ಪತ್ತೆಯಾಗಿವೆ. ಯಾವುದೇ ಪರವಾನಿಗೆ ಹೊಂದರೆ ಅಕ್ರಮವಾಗಿ ಕಸಾಯಿಖಾನೆಯ ಮಳಿಗೆಗಳಲ್ಲಿ ದನಕರುಗಳನ್ನು ಕಡಿದು ಗೋಮಾಂಸವನ್ನು ರಾಜಾರೋಷವಾಗಿ ನೇತುಹಾಕಿ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗೋವುಗಳ ವಧೆಯಾದ ನಂತರ ರಕ್ತ ಮತ್ತು ಇನ್ನಿತರ ತ್ಯಾಜ್ಯವನ್ನು ಚರಂಡಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬಿಸಾಡಿರುವುದು ಕಂಡುಬಂದಿದೆ. ಇದು ಈ ಭಾಗದ ಜನರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿಯನ್ನೂ ಕಾರಣವಾಗಿದೆ. ಹೀಗಾಗಿ, ಈ ಭಾಗದಲ್ಲಿ ತಲೆ ಎತ್ತಿರುವ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಬೇಕು ಎಂದು ಆಗ್ರಹಿಸಲಾಗಿದೆ.
Also Read: ಶಿವಮೊಗ್ಗದಲ್ಲಿ ಭೀಕರ ಬೈಕ್ ಅಪಘಾತ: ಇಬ್ಬರ ದಾರುಣ ಸಾವು
ದೂರಿನ ಅನ್ವಯ ಬೊಮ್ಮನಕಟ್ಟೆ ನಿವಾಸಿಗಳಾದ ಸಾಧಿಕ್, ರುಖಿಯಾ, ಅಮಾನ್ ಎನ್ನುವವರೂ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಶಪಡಿಸಿಕೊಳ್ಳಲಾದ ಗೋವುಗಳನ್ನು ಮಂಡೇನಕೊಪ್ಪದಲ್ಲಿರುವ ಸುರಭಿ ಗೋಶಾಲೆಗೆ ಕಳುಹಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post