ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಾನು ನನ್ನ ಸಾರ್ವಜನಿಕ ಜೀವನದಲ್ಲಿ ಈವರೆಗೂ ನಡೆಸಿಕೊಂಡು ಬಂದ ಹೋರಾಟಗಳಂತೆ ಮುಂದೆಯೂ ಸಹ ನೊಂದವರ ಪರ ಹೋರಾಟ ನಡೆಸುವ ಸಲುವಾಗಿ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನದ ಚುನಾವಣೆಗೆ ಧುಮುಕಿದ್ದೇನೆ ಎಂದು ಜೆಡಿಯು ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಹೇಳಿದರು.
ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ನಾನು ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಮೂರು ಬಾರಿ ಸ್ಪರ್ಧಿಸಿ 3 ಹಾಗೂ 4ನೆಯ ಸ್ಥಾನ ಕಾಯ್ದುಕೊಂಡಿದ್ದು, 2018ರ ಭದ್ರಾವತಿ ವಿಧಾನಸಭಾ ಚುಣಾವಣೆಯಲ್ಲಿ 4ನೆಯ ಸ್ಥಾನವನ್ನು ಪಡೆದುಕೊಂಡಿದ್ದೇನೆ. ನಮ್ಮ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಬಡವರು, ಮಹಿಳೆಯರು, ರೈತರು, ಹಿಂದುಳಿದವರು ಸೇರಿದಂತೆ ಎಲ್ಲ ಜಾತಿ, ಧರ್ಮದವರ ಪರವಾಗಿ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇನೆ ಎಂದರು.
ಈಗ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ನಾನು ವಿಜಯಶಾಲಿಯಾದರೆ ನನಗೆ ಒಕ್ಕಲಿಗರ ಸಮಾಜದ ಜೊತೆಯಲ್ಲಿ ಎಲ್ಲ ವರ್ಗದ ಜಾತಿ ಧರ್ಮದ ನೊಂದವರ ಪರವಾಗಿ ಹೋರಾಟ ಮಾಡಲು ಸಹಾಯವಾಗುತ್ತದೆ ಎಂದರು.










Discussion about this post