ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಪತ್ರಿಕೆಗಳು ಸಮಾಜದ ಸ್ವಾಸ್ಥ್ಯ ಕಾಪಾಡಿ ಭ್ರಷ್ಟಾಚಾರಿಗಳಿಗೆ ಎಚ್ಚರಿಸುವಂತಹ ಸುದ್ದಿ ಪ್ರಕಟಿಸುವಂತಾಗಬೇಕು ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು.
ಅವರು ನಿನ್ನೆ ಸಂಜೆ ಹೊಸ ಸೇತುವೆ ರಸ್ತೆಯ ಶ್ರೀ ಬನಶಂಕರಿ ದೇವಾಲಯದಲ್ಲಿ ಹದ್ದಿನ ಕಣ್ಣು ನೂತನ ಮಾಸ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಯಾವುದೇ ಆಮಿಷಗಳಿಗೆ ಒಳಗಾಗದೆ ಭ್ರಷ್ಟಾಚಾರ, ಅನ್ಯಾಯ-ಅಕ್ರಮ ಹಾಗೂ ತುಳಿತಕ್ಕೊಳಗಾದವರ ಧ್ವನಿಯಾಗಿ ಸತ್ಯಾ ಸತ್ಯತೆ ಪ್ರಕಟಿಸುವಂತಹ ಹಾಗೂ ಓದುಗರ ಮನಮುಟ್ಟುವ ನೈಜ ಸುದ್ದಿಗಳನ್ನು ಬಿತ್ತರಿಸುವಂತಾಗಲಿ ಎಂದರು.
ಸಂಪಾದಕ ಎಚ್. ಮಂಜುನಾಥ್, ಉಪ ಸಂಪಾದಕ ಕೆ.ಆರ್. ಶಿವಾನಂದ, ಹರೀಶ್ ಎಸ್. ಪಾಟೀಲ್, ಅಬ್ದುಲ್ ವಲಿ, ಎಂ. ಹರೀಶ್, ಎಲ್.ಎನ್. ಉದಯ, ಮಂಜುಳಾ, ಕಾಳಾಚಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















