ಭದ್ರಾವತಿ: ಇಲ್ಲಿನ ಹೊರವಲಯದಲ್ಲಿ ಬೈಕ್’ಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ನಟೋರಿಯಸ್ ಗ್ಯಾಂಗ್ ಒಂದನ್ನು ಪೊಲೀಸರು ಬಂಧಿಸಿದ್ದು, ದ್ವಿಚಕ್ರ ವಾಹನ ಸೇರಿದಂತೆ ನಗದು ವಶಪಡಿಸಿಕೊಂಡಿದ್ದಾರೆ.
ಈ ಕುರಿತಂತೆ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಡಿವೈಎಸ್’ಪಿ ಅವರು, ಹೊರವಲಯದಲ್ಲಿ ಬೈಕ್ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ತಂಡವನ್ನು ಬಂಧಿಸಲಾಗಿದೆ ಎಂದಿದ್ದಾರೆ.
ಮಾರ್ಚ್ 5 ರಂದು ಲಕ್ಕವಳ್ಳಿ ಹಾಗೂ ರಾಮಿನಕೊಪ್ಪ ಗ್ರಾಮದ ನಡುವೆ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಬಿಜಿ ದಾಕ್ಲು ಎಂಬುವವರ ಬೈಕ್ ಅಡ್ಡಗಟ್ಟಿದ್ದ ದರೋಡೆಕೋರರು, 20 ಸಾವಿರ ನಗದು, ಒಂದು ಐಫೋನ್, ಆಪಲ್ ಕಂಪನಿಯ ಒಂದು ಐ-ಪ್ಯಾಡ್ ದೋಚಿದ್ದರು.
ಈ ದರೋಡೆ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದರು. ಇದರಿಂದ ತತಕ್ಷಣ ಎಚ್ಚೆತ್ತುಕೊಂಡ ಭದ್ರಾವತಿ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಮಾಸ್ಟರ್ ಪ್ಲಾನ್ ಮಾಡಿದ್ದರು.
ದೂರಿನ ಅನ್ವಯ ಸಮಗ್ರ ಮಾಹಿತಿ ಕಲೆ ಹಾಕಿ ಬಲೆ ಬೀಸಿದ ಪೊಲೀಸರು ಆರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿದ್ದಾಪುರ ಗ್ರಾಮದ ಧ್ರುವಕುಮಾರ ಅಲಿಯಾಸ್ ಧ್ರುವ, ಹೊಸ ಸಿದ್ದಾಪುರ ನಿವಾಸಿ ಸಚಿನ್, ವೇಲೂರ್ ಶೆಡ್ ನಿವಾಸಿ ಯೋಗೇಶ್, ಹೊಸ ಸಿದ್ದಾಪುರ ಗ್ರಾಮದ ನಿವಾಸಿ ಗಿರೀಶ್ ಕುಮಾರ್ ಎಂಬುವವರು ಬಂಧಿತರಾಗಿದ್ದು, ವೇಲೂರು ಶೆಡ್ ನ ಇಮ್ರಾನ್ ತಲೆಮರೆಸಿಕೊಂಡಿದ್ದಾನೆ.
ಭದ್ರಾವತಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರಕರಣಗಳು, ಶಿವಮೊಗ್ಗ ನಗರದ ತುಂಗಾನಗರದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎರಡು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.
Discussion about this post