ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕಾಂಗ್ರೆಸ್ ಸರಕಾರ ಗ್ಯಾರೆಂಟಿ ನೆಪದಲ್ಲಿ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕಿತ್ತುಕೊಳ್ಳುವ ಕಾರ್ಯವನ್ನು ಮಾಡುತ್ತಿದೆ ಎಂದು ಸಂಸದರಾದ ಬಿ.ವೈ. ರಾಘವೇಂದ್ರ #BYRaghavendra ಆಪಾದಿಸಿದರು.
ನರೇಂದ್ರ ಮೋದಿ #NarendraModi ಅವರ ನೇತೃತ್ವದ ಕೇಂದ್ರ ಸರಕಾರಕ್ಕೆ 9 ವರ್ಷ ತುಂಬಿದ ಸಂದರ್ಭದಲ್ಲಿ ಅವರು ಶುಕ್ರವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.

ಪಕ್ಷದ ಕಾರ್ಯಕರ್ತರ ನೇತೃತ್ದಲ್ಲಿ ಸಂಪರ್ಕ್ ಸೆ ಸಮರ್ಥನ್ ಕಾರ್ಯಕ್ರಮದಡಿ ಕಾರ್ಯಕರ್ತರು, ಸಂಘಟನೆಯ ಹಿತೈಷಿಗಳನ್ನು, ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಮಾಡುವಂತಹ ವಿಶೇಷ ಕಾರ್ಯಕ್ರಮ ಇಡೀ ದೇಶಾದ್ಯಂತ ಈಗಾಗಲೇ ಹಮ್ಮಿಕೊಳ್ಳಲಾಗಿದೆ. ಈ ಮುಖಾಂತರ ಕೇಂದ್ರ ಸರಕಾರದ ಸಾಧನೆಗಳನ್ನು ಚರ್ಚೆ ಮಾಡಿ ಜನಸಾಮಾನ್ಯರಿಗೆ ಮುಟ್ಟಿಸುವಂತಹ ಕಾರ್ಯವನ್ನು ಮಾಡಲಾಗುತ್ತಿದೆ. ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಪ್ರದೇಶಗಳಲ್ಲಿ ಭೇಟಿ ನೀಡಿ, ಅಪೂರ್ಣಗೊಂಡ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರೈಸುವ ನಿಟ್ಟಿನಲ್ಲಿ ಹಾಗೂ ಚುನಾಯಿತ ಪ್ರತಿನಿಧೀಗಳ ನೇತೃತ್ವದಲ್ಲಿ ವಿಕಾಸ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

2009ಕ್ಕೂ ಮೊದಲು ಕೇವಲ 8-10 ಟ್ರೇನುಗಳು ಮಾತ್ರ ಓಡಾಟ ಇತ್ತು. ಇದೀಗ 28 ಟ್ರೇನುಗಳ ಟ್ರಿಪ್ ಓಡಾಟ ಆರಂಭವಾಗಿದೆ. ಎರಡು ರೈಲ್ವೆ ಓವರ್ ಬ್ರಿಡ್್ಜ ನಿರ್ಮಾಣವಾಗಿದ್ದು (ಭದ್ರಾವತಿ ತರೀಕೆರೆ ರಸ್ತೆಯಲ್ಲಿ, ಶಿವಮೊಗ್ಗ-ಹೊನ್ನಾಳಿ ರಸ್ತೆಯಲ್ಲಿ), ಇನ್ನೂ ನಾಲ್ಕು ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣ ಆಗಲಿದೆ ಎಂದು ಮಾಹಿತಿ ನೀಡಿದರು.

Also read: ಹರಿದಾಸರ ಮಿಲನ, ದಾಸೋಪಾಸನ ಹಾಗೂ ಚಿಪ್ಪಗಿರಿ ವಿಜಯದಾಸರ ಸೇವಾ ಬಳಗ ವಾರ್ಷಿಕೋತ್ಸವ
ಭದ್ರಾವತಿ ವಿಐಎಸ್’ಎಲ್ #VISL ಕಾರ್ಖಾನೆಯನ್ನು ಬಂಡವಾಳ ಹೂಡಿಕೆ ಪಟ್ಟಿಯಿಂದ ಹಿಂಪಡೆದಿದ್ದನ್ನು ರದ್ದುಪಡಿಸುವಂತೆ ಕೇಂದ್ರದ ಮೇಲೆ ಒತ್ತಡ ಹಾಕಿದ್ದರ ಪರಿಣಾಮ ಕೇಂದ್ರ ಸರ್ಕಾರ ವಾಪಸು ಪಡೆದಿದೆ. ಕೆಲವು ಸಣ್ಣಪುಟ್ಟ ಯುನಿಟ್ಗಳನ್ನು ಫೋರ್ಜ್ ಯುನಿಟ್ಗಳನ್ನು ಪ್ರಾರಂಭಿಸಲಾಗಿದ್ದು, ಉತ್ತಮ ಆದಾಯ ಬರುವಂತಾಗಿದೆ ಎಂದರು.

ಈಗ ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆ ಆಗಿರುವುದು ತಾತ್ಕಾಲಿಕ ಮಾತ್ರ. ಈ ಸಂದರ್ಭ ಕಾಂಗ್ರೆಸ್ ಸರಕಾರ ಮಾಡುತ್ತಿರುವು ಘೋಷಣೆಗಳು ಹಾಗೂ ತೆಗೆದುಕೊಳ್ಳುವಂತಹ ನಿಲುವುಗಳು ಎಲ್ಲ ವೂ ಅಚ್ಚರಿಯಾಗಿದೆ. ದೇಶದ ಹಿತ ದೃಷ್ಟಿಯಿಂದ ಮಹಾನ್ ನಾಯಕ ಸಾವರ್ಕರ್ ಅವರ ಇತಿಹಾಸ ಪುಟದಿಂದ ಮುಚ್ಚಿಡುವಂತಹ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಅದನ್ನು ಸೇರಿಸುವಂತಹ ಕೆಲಸವನ್ನು ಬಿಜೆಪಿ ಸರಕಾರ ಮಾಡಿದಾಗ, ಈಗ ಕಾಂಗ್ರೆಸ್ ಸರಕಾರ ತೆಗೆಯುವ ಕೆಲಸವನ್ನು ಮಾಡುತ್ತಿದೆ. ಇದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಥವಾ ಬಿಜೆಪಿಯ ಸಿದ್ಧಾಂತಗಳಿಲ್ಲ, ಇವರು ಬ್ರಿಟೀಷರ ವಿರುದ್ಧ ಗುಂಡಿಗೆ ಎದೆಗೊಟ್ಟು ದೇಶದ ರಕ್ಷಣೆಗೋಷ್ಕರ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಮಹಾನ್ ನಾಯಕರ ಪಾಠವನ್ನು ತೆಗೆದು ಹಾಕುವ ಕೆಲಸ ನಿಜಕ್ಕೂ ಖಂಡನೀಯ, ಅಲ್ಲದೇ ಗೋ ಹತ್ಯೆಯನ್ನು ನಿಷೇಧ ಕಾಯಿದೆ ರದ್ದಗೊಳಿಸುವ ಕುರಿತು ಪಶು ಸಂಗೋಪನಾ ಸಚಿವರು ಹೇಳಿರುವುದು ದೌರ್ಭಾಗ್ಯ. ಕಾಂಗ್ರೆಸ್ ಹೀಗೆ ದ್ವೇಷದ ಕಾರಣವನ್ನು ಮಾಡಿದರೆ ಮತ್ತೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂತರೆ ಅನುಮಾನ ಇಲ್ಲ ಎಂದರು.
ರಾಜ್ಯದ ಎಲ್ಲ ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ಬಸ್ ಸಂಚಾರವನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.
ಭದ್ರಾವತಿ ಕ್ಷೇತ್ರ ಬಿಜೆಪಿ ಉಸ್ತುವಾರಿ ಅಶೋಕ್ ಮೂರ್ತಿ, ಜಿಲ್ಲಾ ಬಿಜೆಪಿ ಮುಖಂಡರಾದ ಡಾ.ಧನಂಜಯ ಸರ್ಜಿ, ಮಂಗೋಟೆ ರುದ್ರೇಶ್, ಧರ್ಮಪ್ರಸಾದ್, ಪ್ರಧಾನ ಕಾರ್ಯದರ್ಶೀ ಶ್ರೀನಾಥ್, ಕೂಡ್ಲಿಗೆರೆ ಹಾಲೇಶ್ ಮತ್ತಿತರರು ಹಾಜರಿದ್ದರು.











Discussion about this post