ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನ ಸುಣ್ಣದಹಳ್ಳಿಯಲ್ಲಿ ಮಾರ್ಚ್ 29ರಂದು ವೀರಾಂಜನೇಯ ಸ್ವಾಮಿ ರಥೋತ್ಸವ ಹಮ್ಮಿಕೊಳ್ಳಲಾಗಿದೆ.
27ರ ಶನಿವಾರದಿಂದ ದೇವಾಲಯದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ ಪಂಚಾಮೃತ ಅಭಿಷೇಕ ಮತ್ತು ಮಹಾಮಂಗಳಾರತಿ. ಸಂಜೆ ಸ್ವಸ್ತಿ ಪುಣ್ಯವಾಚನ, ವಾಸ್ತು ರಕ್ಷೆಘ್ನಹೋಮ, ವಾಸ್ತುಪೂಜೆ ದಿಗ್‌ಬಲಿ ಹಾಗೂ ಯಾಗಶಾಲಾ ಪ್ರವೇಶ ನಡೆಯಲಿದೆ.
28ರ ಭಾನುವಾರ ಬೆಳಗ್ಗೆ ಅಂಕುರಾರ್ಪಣೆ, ನವಗ್ರಹ ಹೋಮ, ಗರುಡಹೋಮ, ಭೇರಿತಾಡನ, ಕಂಕಣ ಬಂಧನ, ಧ್ವಜಾರೋಹಣ, ಮಹಾಮಂಗಳಾರತಿ. ಸಂಜೆ ಅಗ್ನಿ ಜನನ, ರಂಗಪೂಜೆ, ತಂತ್ರಬಲಿ, ಮಂಗಳಾರತಿ ಜರುಗಲಿದೆ.
29ರ ಸೋಮವಾರ ಬೆಳೆಗ್ಗೆ ರಥಶುದ್ಧಿ, ಪ್ರಧಾನಹೋಮ, ರಥೋತ್ಸವ ನಂತರ ಅನ್ನಸಂರ್ಪಣೆ ಏರ್ಪಡಿಸಲಾಗಿದೆ. ಸಂಜೆ ಅಷ್ಟಾವದಾನ ಸೇವೆ, ಬಲಿ, ಶಯನೋತ್ಸವ ಮಂಗಳಾರತಿ ಏರ್ಪಡಿಸಲಾಗಿದೆ.
30ರ ಮಂಗಳವಾರ ಬೆಳಿಗ್ಗೆ ಅವಭೃತ ಸ್ನಾನ, ಪ್ರಧಾನ ಹೋಮದ ಪೂರ್ಣಾಹುತಿ, ಗಣಹೋಮ ಮತ್ತು ಸಂಜೆ ರಾಜಬೀದಿ ಉತ್ಸವ ಆಯೋಜಿಸಲಾಗಿದೆ.
31ರ ಬುಧವಾರ ಬೆಳಿಗ್ಗೆ ಕಲಾತತ್ವಹೋಮ, ಕುಂಭಾಭಿಷೇಕ ಮತ್ತು ಮಂಗಳಾರತಿಯೊಂದಿಗೆ ರಥೋತ್ಸವ ಸಂಪನ್ನವಾಗಲಿದೆ ಎಂದು ದೇವಾಲಯದ ಸಮಿತಿ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post