ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಪ್ರತಿಯೊಬ್ಬರೂ ತಮ್ಮಲ್ಲಿಯ ಧನದ ಸ್ವಲ್ಪ ಭಾಗವನ್ನು ತಿಮ್ಮಪ್ಪ ದೇವರಿಗೆ ಅರ್ಪಿಸಿ ಅನುಸಂಧಾನ ಮಾಡಿದಲ್ಲಿ ಶ್ರೀ ಲಕ್ಷ್ಮಿ ಹಾಗೂ ಶ್ರೀನಿವಾಸ ದೇವರ ಅನುಗ್ರಹದಿಂದ ಅವರ ಬಾಳು ಬಂಗಾರವಾಗುತ್ತದೆ ಎಂದು ಉಡುಪಿ ಶ್ರೀ ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದಂಗಳವರು ಹೇಳಿದರು.
ಶ್ರೀ ಸಂಕರ್ಷಣ ಧರ್ಮ ಸಂಸ್ಥೆ ವತಿಯಿಂದ ಇತ್ತೀಚೆಗೆ ಲೋಕಾರ್ಪಣೆಗೊಳಿಸಿರುವ ಶ್ರೀ ಶ್ರೀನಿವಾಸ ದೇವರ ದೇವಸ್ಥಾನದ 48ನೆಯ ಮಂಡಲ ಪೂಜೆ ನಿಮಿತ್ತ ನಗರಕ್ಕೆ ಆಗಮಿಸಿರುವ ಅವರು ಅನುಗ್ರಹ ಸಂದೇಶ ನೀಡಿ ಮಾತನಾಡಿದರು.
ಶ್ರೀತಿಮ್ಮಪ್ಪನ ಅನುಸಂಧಾನ ಕುರಿತಾಗಿ ತಿಳಿಸಿದ ಅವರು, ನಮ್ಮಲ್ಲಿಯ ಶ್ರೀ ಲಕ್ಷ್ಮೀ ಅಥವಾ ಹಣ ವಧುವಿನ ಸಮಾನ. ತಿಮ್ಮಪ್ಪ ವರನ ಸಮಾನ. ಎಂದಿಗೂ ನಮ್ಮಲ್ಲಿರುವ ವಧು ವರನ ಬಳಿಗೆ ತೆರಳಬೇಕು. ಹಾಗೆಯೇ ನಮ್ಮಲ್ಲಿರುವ ಲಕ್ಷ್ಮೀ ಅಥವಾ ಹಣದಲ್ಲಿ ಸ್ವಲ್ಪ ಭಾಗ ತಿಮ್ಮಪ್ಪನಿಗೆ ಅರ್ಪಿಸಿದರೆ ತಿಮ್ಮಪ್ಪ ಅದನ್ನು ಅನಂತ ಮಾಡಿ ನಮಗೆ ಮರಳಿ ಕೊಡುತ್ತಾನೆ ಎಂದರು.
ಪ್ರತಿ ಬಾರಿಯೂ ತಿಮ್ಮಪ್ಪನ ಬಳಿ ತೆರಳಲು ಸಾಧ್ಯವಿಲ್ಲದ ಕಾರಣ ನಾವು ಇದ್ದಲ್ಲಿಂದಲೇ ಪ್ರಾರ್ಥನೆ ಮಾಡಿ ಕಾಣಿಕೆ ಅರ್ಪಿಸಿದರೆ ತಿಮ್ಮಪ್ಪನೇ ಆ ಹಣದ ಜೊತೆಗೆ ಅಥವಾ ಅಂದರೆ ತಿಮ್ಮಪ್ಪ ಎಂಬ ವರ ಲಕ್ಷ್ಮೀ ಎಂಬ ವಧುವಿನ ಜೊತೆಯಲ್ಲೇ ಆಗಮಿಸಿ ನಮ್ಮಲ್ಲಿ ನೆಲೆಸುತ್ತಾನೆ. ಹೀಗೆ, ನಮ್ಮಲ್ಲಿಯ ಹಣವನ್ನು ಈ ರೀತಿಯಲ್ಲಿ ಅನುಸಂಧಾನ ಮಾಡಿದಾಗ ಅಂತಹವರ ಬಾಳು ಬಂಗಾರವಾಗುತ್ತದೆ ಎಂದರು.
ಇಂದು ಸಂಜೆ ನಗರಕ್ಕೆ ಆಗಮಿಸಿದ ಶ್ರೀಗಳನ್ನು ಭದ್ರಾವತಿಯ ಸಮಸ್ತ ಮಾಧ್ವ ಸಮುದಾಯವರು ಸ್ವಾಗತಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post