ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಪ್ರಯಾಣಿಕನೋರ್ವ ಚಲಿಸುತ್ತಿದ್ದ ಬಸ್‌ನಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ನಗರದ ಬೈಪಾಸ್ ರಸ್ತೆ ವೀರಾಪುರ ತಿರುವಿನ ಬಳಿ ಗುರುವಾರ ನಡೆದಿದೆ.
ತರೀಕೆರೆ ತಾಲೂಕಿನ ಅಮೃತಪುರ ಹೋಬಳಿ ವ್ಯಾಪ್ತಿಯ ಕೆ. ನದೀಶ್ (೩೪) ಮೃತಪಟ್ಟಿದ್ದು, ಶಿವಮೊಗ್ಗದಿಂದ ತರೀಕೆರೆಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
Also read: ಅಸಮರ್ಪಕ ಇ-ತ್ಯಾಜ್ಯ ವಿಲೇವಾರಿ ಪ್ರಕೃತಿಗೆ ಮಾರಕ: ಡಾ. ಧನಂಜಯ ಸರ್ಜಿ ಅಭಿಪ್ರಾಯ
ಘಟನೆ ಸಂಬಂಧ ನದೀಶ್ ತಾಯಿ ಗಂಗಮ್ಮ ಬಸ್ ಚಾಲಕ ಮತ್ತು ನಿರ್ವಾಹಕರ ವಿರುದ್ಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















