ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಗಾಂಜಾ ಪ್ರಕರಣಕ್ಕೆ #Ganja Case ಸಂಬಂಧಪಟ್ಟಂತೆ ಆರೋಪಿ ನಸ್ರುಲ್ಲಾ ಎಂಬಾತನನ್ನು ಬಂಧಿಸಲು ತೆರಳಿದ್ದ ಪೊಲೀಸ್ ಮೇಲೆ ದಾಳಿಗೆ ಯತ್ನಿಸಿದ ಪರಿಣಾಮ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿರುವ ಘಟನೆ ಭದ್ರಾವತಿಯಲ್ಲಿ #Police firing ನಡೆದಿದೆ.
ಭದ್ರಾವತಿ ಅನ್ವರ್ ಕಾಲೋನಿಯ ವಾಸಿ ನಸ್ರು ಅಲಿಯಾಸ್ ನಸ್ರುಲ್ಲಾ (21) 5 ಪ್ರಕರಣದ ಆರೋಪಿ. ನಿನ್ನೆ ಭದ್ರಾವತಿ ಓಲ್ಡ್ ಟೌನ್ ಪಿಎಸ್ಐ ಚಂದ್ರಶೇಖರ್ 1.4ಕೆಜಿ ಗಾಂಜಾದೊಂದಿಗೆ 4 ಆರೋಪಿಗಳನ್ನು ವಶಕ್ಕೆ ಪಡೆದಿದ್ದರು ಈ ಪೈಕಿ ನಸ್ರು ಪರಾರಿಯಾಗಿದ್ದನು. ಇಂದು ಬೆಳಗ್ಗೆ ಪಿಎಸ್ಐ ತಂಡ ನಸ್ರುನನ್ನು ಹಿಡಿಯಲು ಹೋದಾಗ ನಸ್ರು ದೇಶೀಯ ನಿರ್ಮಿತ ಪಿಸ್ತೂಲ್ ಮತ್ತು ಕಠಾರಿಯಿಂದ ಪೋಲೀಸರ ಮೇಲೆ ದಾಳಿಗೆ ಮಾಡಲು ಯತ್ನಿಸಿದ್ದಾನೆ ಈ ವೇಳೆ ಪಿಎಸ್ಐ ಚಂದ್ರಶೇಖರ್ ನಸ್ರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post