ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹರಿದಾಸ ಮಹಿಳಾ ಮಂಡಳಿಯಿಂದ ಹಳೆ ನಗರ ರಾಘವೇಂದ್ರ ಸ್ವಾಮಿ ಮಠದಲ್ಲಿ ಇಂದು ಪುರಂದರದಾಸರ ಆರಾಧನೆ ಮಹೋತ್ಸವ ನಡೆಯಿತು.
ಬೆಳಿಗ್ಗೆ ಅಭಿಷೇಕ ಕಾರ್ಯಕ್ರಮದ ನಂತರ ರಾಘವೇಂದ್ರ ಸ್ವಾಮಿ ಮಠದಿಂದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದವರೆಗೆ ಜಯತೀರ್ಥರು ಪುರಂದರದಾಸರ ವೇಷವನ್ನು ಹಾಕಿಕೊಂಡು ಮೆರವಣಿಗೆ ನಡೆಸಲಾಯಿತು.

ನಂತರ ಹರಿದಾಸ ಮಹಿಳಾ ಮಂಡಳಿ, ಕರಾವಳಿ ವಿಪ್ರ ಬಳಗ, ಜ್ಞಾನವಾಹಿನಿ ಹಾಗೂ ಹರಿಪ್ರಿಯಾ ಭಜನಾ ಮಂಡಳಿಯಿಂದ ಪುರಂದರದಾಸರ ಕೀರ್ತನೆಯನ್ನು ಹಾಡಿದರು. 12 ಗಂಟೆಗೆ ವೇದ ಬ್ರಹ್ಮ ಗೋಪಾಲ್ ಆಚಾರ್ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಪರಿಮಳ ನಾಗರಾಜ್, ಶೋಭಾ ಶ್ರೀಧರ್, ಗಾಯತ್ರಿ ದೇಶಪಾಂಡೆ, ಶೋಭಾ, ರಘು, ತುಳಸಾಬಾಯಿ, ಮುರುಳಿಧರ್ ತಂತ್ರಿ, ನಿರಂಜನ್, ರಮಾಕಾಂತ್, ಪ್ರಮೋದ್, ಪವನ ಉಡುಪ, ಸುಮಾ ರಾಘವೇಂದ್ರ, ಗುರುರಾಜ್, ನಾಗರಾಜ್ ಉಪಾಧ್ಯಾಯ, ಶ್ರೀಪತಿ ತಂತ್ರಿ, ವಿದ್ಯಾನಂದ ನಾಯಕ ಇನ್ನಿತರರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















