ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರದ ವಿವಿಧ ಬಡಾವಣೆಗಳಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಭಾನುವಾರ ಶ್ರೀರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ ಆಚರಿಸಲಾಯಿತು.
ಹಳೇನಗರದಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮುಖ್ಯ ಪ್ರಾಣದೇವರಿಗೆ, ಶ್ರೀವಾದಿರಾಜ ಸ್ವಾಮಿಗಳ, ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಫಲಪಂಚಾಮೃತ ಅಭಿಷೇಕವನ್ನು ಮಾಡಿ ವಿಶೇಷ ಅಲಂಕಾರ ಮಾಡಲಾಯಿತು.
ನಂತರ ಮಂಗಳ ವಾದ್ಯ ಸಹಿತವಾಗಿ ಶ್ರೀಮುಖ್ಯಪ್ರಾಣದೇವರ, ಗುರುರಾಯರ ರಜತ ವೃಂದಾವನ ಹಾಗೂ ಪಾದ ಪೂಜೆ ಉತ್ಸವವನ್ನು ಮಾಡಲಾಯಿತು.
ಸಿದ್ಧಾರೂಢ ನಗರದಲ್ಲಿರುವ ನಂಜನಗೂಡು ರಾಯರ ಮಠ, ಜನ್ನಾಪುರದಲ್ಲಿರುವ ಶ್ರೀಮಠದಲ್ಲಿ ಆರಾಧನೆಯ ಮೊದಲ ದಿನ ವಾದ ಭಾನುವಾರ ಅಭಿಷೇಕ, ಅಲಂಕಾರ ಮಾಡಿ ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post