ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಶಿಕ್ಷಕಿಯಾಗಿ ಭದ್ರಾವತಿ ತಾಲೂಕಿನಲ್ಲಿ ಬಹಳ ಹೆಸರು ಮಾಡಿದ್ದ ಶ್ಯಾಮಲಾ ಎನ್ (79) ಇಂದು ಮಧ್ಯಾಹ್ನ ವಿಧಿವಿಶರಾಗಿದ್ದಾರೆ. ವಯೋ ಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರು, ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
ಮೃತರು, ತಾಲೂಕಿನ ಹಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದು, ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶ್ರಮ ವಹಿಸಿದ್ದರು. ಮೃತರ ಪತಿ ಮಹಾಬಲ ರಾವ್, ನಾಲ್ವರು ಪುತ್ರಿಯರು, ಅಳಿಯ ಆರ್‌ಎಸ್‌ಎಸ್ ಸುಬ್ಬಣ್ಣ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಶಿಷ್ಯ ವೃಂದವನ್ನು ಅಗಲಿದ್ದಾರೆ.
ಇವರ ಆತ್ಮಕ್ಕೆ ಶಾಸಕ ಬಿ.ಕೆ. ಸಂಗಮೇಶ್ವರ್, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜನಾರ್ಧನ ಐಯ್ಯಂಗಾರ್, ತಾಲೂಕು ಬಿಜೆಪಿ ಪ್ರಮುಖರಾದ ಧರ್ಮ ಪ್ರಸಾದ್, ಮಂಗೋಟೆ ರುದ್ರೇಶ್, ಆನಂದ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















