ಭದ್ರಾವತಿ: ಹುತ್ತಾ ಕಾಲೋನಿಯ ಸಹ್ಯಾದ್ರಿ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿನಿ ಆರ್. ದೀಪಾ 2018-19 ನೆಯ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 576 ಶೇ: 92.16 ಅಂಕಗಳನ್ನು ಪಡೆದು ಶಾಲೆಯ ಅತ್ಯುನ್ನತ ವಿದ್ಯಾರ್ಥಿಯಾಗಿ ಹೊರ ಹೊಮ್ಮಿದ್ದಾಳೆ.
ಕನ್ನಡ ಭಾಷೆಯಲ್ಲಿ 124, ಇಂಗ್ಲೀಷ್ 93, ಹಿಂದಿ 96, ಗಣಿತ 91, ವಿಜ್ಞಾನ 88 ಹಾಗೂ ಸಮಾಜ ವಿಜ್ಞಾನ 84 ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿರುವ ಈ ಬಾಲಕಿಯು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಕೆ.ಎನ್.ಆಶಾ ಮತ್ತು ರವಿ ರವರ ಪುತ್ರಿಯಾಗಿದ್ದಾಳೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post