ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕ್ಷುಲ್ಲಕ ಕಾರಣಕ್ಕಾಗಿ ಹತ್ಯೆಗೀಡಾದ ಪೌರ ಕಾರ್ಮಿಕ ಸುನೀಲ್ ಕುಟುಂಬಕ್ಕೆ ಮತ್ತು ಗಾಯಾಳುವಾದ ಶ್ರೀಕಂಠ ಇವರಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಜೂರಾದ 8.50 ಮತ್ತು 4.12 ಲಕ್ಷದ ಪರಿಹಾರ ಚೆಕ್ಕನ್ನು ಶಾಸಕ ಬಿ.ಕೆ. ಸಂಗಮೇಶ್ವರ ಅವರು ವಿತರಿಸಿದರು.
ಮೃತರಾದ ಸುನಿಲ್ ಇವರ ಕುಟುಂಬದವರಿಗೆ ಮುಂಗಡವಾಗಿ 4. 12 ಲಕ್ಷ ಮತ್ತು ಗಾಯಗೊಂಡ ಶ್ರೀಕಂಠ ಇವರಿಗೆ ಮುಂಗಡವಾಗಿ 50 ಸಾವಿರ ಮೊತ್ತದ ಚೆಕ್’ನ್ನು ವಿತರಣೆ ಮಾಡಿ ಉಳಿದ ಮೊತ್ತವನ್ನು ಸರಕಾರದಿಂದ ಮಂಜೂರು ಮಾಡಿಸುವ ಮತ್ತು ಸುನಿಲ್ ಇವರ ಪತ್ನಿಗೆ ನಗರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೌಕರಿ ನೀಡುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ವಾರ್ಡಿನ ನಗರಸಭಾ ಸದಸ್ಯರಾದ ಬಿ.ಎಂ. ಮಂಜುನಾಥ್, ಡಿಎಸ್’ಎಸ್ ಮುಖಂಡರಾದ ಸತ್ಯ ಚಿನ್ನಯ್ಯ ಮತ್ತು ನರಸಿಂಹಮೂರ್ತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಅವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post