ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಬಿ.ಕೆ. ಸಂಗಮೇಶ್ವರ್ #BKSangameshwar ರವರು ಈ ಭಾರಿ ನಡೆಯುವ ಚುನಾವಣೆಯಲ್ಲಿ ಸುಮಾರು 30 ರಿಂದ 35 ಸಾವಿರ ಮತಗಳ ಅಂತರದಿಂದ ಗೆಲುವು ನಿಶ್ಚಿತ ಎಂದು ಶಾಸಕರ ಸಹೋದರ ಹಾಗೂ ನಗರಸಭಾ ಸದಸ್ಯ ಬಿ.ಕೆ. ಮೋಹನ್ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚುನಾವಣೆಯಲ್ಲಿ ಪಕ್ಷದ ಪ್ರಚಾರದ ಮಾಹಿತಿಯನ್ನು ನೀಡಿ ಶಾಸಕರ ಐದು ವರ್ಷದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಪುಸ್ತಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಚುನಾವಣೆ ನಮಗೆ ಹೊಸದಲ್ಲ. ಕಳೆದ ಭಾರಿ ಶಾಸಕರಾಗಿ ಆಯ್ಕೆಯಾದಾಗಿನಿಂದ ನಾವು ಜನರ ಮಧ್ಯೆ ಇದ್ದು ಅವರ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದೇವೆ. ಎಲ್ಲದಕ್ಕಿಂತ ಬಹು ಮುಖ್ಯವಾಗಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲಾಗಿದೆ. ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗಿಲ್ಲ. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಎಂದೂ ಅವಕಾಶ ನೀಡಲ್ಲ. ಇದರ ಫಲ ಜೆಡಿಎಸ್ #JDS ಹಾಗೂ ಬಿಜೆಪಿ #BJP ಪಕ್ಷದಿಂದ ಸಾವಿರಾರು ಕಾರ್ಯಕರ್ತರುಗಳು ಕಾಂಗ್ರೆಸ್ ಪಕ್ಷದ ನೀತಿ ಸಿದ್ದಾಂತಗಳನ್ನು ಮೆಚ್ಚಿ ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದಾರೆ ಎಂದರು.
ಚುನಾವಣೆಗೂ ಮೊದಲು 42 ಕೋಟಿ ರೂ. ವೆಚ್ಚದಲ್ಲಿ ಸುಮಾರು 110 ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಸರ್ಕಾರದ ಮಂಜೂರಾತಿ ದೊರೆತಿದೆ. ಇದು ಕ್ಷೇತ್ರದ ರೈತರ ಪಾಲಿಗೆ ವರದಾನವಾಗಲಿದೆ ಎಂದರು.
ನಗರಾಧ್ಯಕ್ಷ ಹಾಗೂ ನ್ಯಾಯವಾದಿ ಟಿ. ಚಂದ್ರೇಗೌಡ ಮಾತನಾಡಿ, ಶಾಸಕರು ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಚುನಾವಣಾ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ಈಗಾಗಲೇ ನಗರದ ಎಲ್ಲಾ 35 ವಾರ್ಡ್’ಗಳಲ್ಲಿ ಒಂದು ಸುತ್ತಿನ ಪ್ರಚಾರವನ್ನು ಮಾಡಲಾಗಿದ್ದು ಮತದಾರರಿಂದ ಉತ್ತಮವಾದ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು.
ಮುಂದಿನ ತಿಂಗಳಿನಲ್ಲಿ ಕಾಂಗ್ರೆಸ್ ನಾಯಕರುಗಳಾದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ಇತರ ನಾಯಕರುಗಳು ಚುನಾವಣಾ ಪ್ರಚಾರಕ್ಕೆ ಆಗಮಿಸುವ ನಿರೀಕ್ಷೆ ಇದೆ. ಅದಕ್ಕೆ ಪೂರ್ವ ಭಾವಿ ಸಿದ್ದತೆಗಳನ್ನು ಮಾಡಲಾಗುತ್ತಿದೆ ಎಂದರು.
ನಗರದ ಎಂಪಿಎಂ ಹಾಗೂ ವಿಐಎಸ್’ಎಲ್ ಅವಳಿ ಕಾರ್ಖಾನೆಗಳ ಬಗ್ಗೆ ಬಿಜೆಪಿ ಯವರು ಕಾರ್ಮಿಕರ ಬದುಕಿನ ಬಗ್ಗೆ ಚಲ್ಲಾಟವಾಡಿದ್ದು, ಇದಕ್ಕೆ ಈ ಬಾರಿ ಚುನಾವಣೆಯಲ್ಲಿ ತಕ್ಕ ಪಾಠವನ್ನು ಮತದಾರರು ಕಲಿಸಲಿದ್ದಾರೆ ಎಂದರು.
ರಾಷ್ಟ್ರ ಯುವ ಕಾಂಗ್ರೆಸ್ ಅಧ್ಯಕ್ಷ ಭದ್ರಾವತಿ ಮೂಲದ ಬಿ.ವಿ. ಶ್ರೀನಿವಾಸ್ ರವರ ಮೇಲೆ ಅಸ್ಸಾಂ ನ ಯುವ ಕಾಂಗೈ ಘಟಕದ ಅಧ್ಯಕ್ಷೆ ಅಂಕಿತಾ ದತ್ತಾ ಅಲ್ಲಿನ ಸಿಎಂ ರವರ ಕುಮ್ಮಕ್ಕಿನಿಂದ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿದ್ದು ಇದರ ಬಗ್ಗೆ ಪಕ್ಷವು ಸಮರ್ಥವಾಗಿ ಉತ್ತರ ನೀಡುತ್ತದೆ ಎಂದರು.
ಗ್ರಾಮಾಂತರ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ ಮಾತನಾಡಿ, ಕಳೆದ ಭಾರಿ ಶಾಸಕರಾಗಿ ಚುನಾಯಿತರಾದ ನಂತರ ಕ್ಷೇತ್ರದಲ್ಲಿ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನರ ಒಲವುಗಳಿಸಲಾಗಿದೆ. ಅವರು ಐದು ಭಾರಿ ಸ್ಪರ್ಧಿಸಿದ್ದು ಮೂರು ಬಾರಿ ಗೆದ್ದಿದ್ದು, ಎರಡು ಭಾರಿ ಸೋತಿದ್ದಾರೆ. ಈ ಭಾರಿ ಗೆಲುವು ಸಾಧಿಸುವ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದ್ದು, ನೂತನ ಸರ್ಕಾರದಲ್ಲಿ ತಮ್ಮ ಸಹೋದರ ಸಂಗಮೇಶ್ವರ್ ಮಂತ್ರಿ ಆಗುವುದು ನಿಶ್ಚಿತ. ಇದರಿಂದ ಭದ್ರಾವತಿ ಅಭಿವೃಧ್ಧಿ ಕಾರ್ಯಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಆಗುತ್ತದೆ ಎಂದರು.
ಲಿಂಗಾಯಿತ ಸಮುದಾಯದ ಬಗ್ಗೆ ಕಾಂಗ್ರೆಸ್’ನವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಬಿಜೆಪಿಯವರು ಆರೋಪ ಮಾಡುತ್ತಿರುವ ಬಗ್ಗೆ ಪಕ್ಷದ ಮುಖಂಡರುಗಳು ತೀವ್ರವಾಗಿ ಆಕ್ಷೇಪಿಸಿ ಇದು ಬಿಜೆಪಿಗೆ ತಿರುಗು ಬಾಣವಾಗುವುದರಲ್ಲಿ ಯಾವುದೆ ಅನುಮಾನ ಇಲ್ಲ. ಕಾರಣ ಅವರ ಪಕ್ಷದ ಸಿಎಂ ಯಡಿಯೂರಪ್ಪ ನವರನ್ನು ಹೀನಾಯಮಾನವಾಗಿ ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಪಕ್ಷವನ್ನು ತೊರೆದಿರುವುದು ಲಿಂಗಾಯಿತ ಸಮುದಾಯವು ಆಕ್ರೋಶಗೊಂಡಿದೆ. ಇದರ ತಪ್ಪನ್ನು ಮುಚ್ಚಿಕೊಳ್ಳುವುದಕ್ಕಾಗಿ ಸುಖಾ ಸುಮ್ಮನೆ ಕಾಂಗೈ ಪಕ್ಷದೆ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು ಸ್ಪಷ್ಟನೆ ನೀಡಿದರು.
ನಗರಸಭಾ ಅಧ್ಯಕ್ಷೆ ಅನುಸುಧಾ ಮೋಹನ್, ಉಪಾಧ್ಯಕ್ಷೆ ಸರ್ವಮಂಗಳಮ್ಮ, ಬಿ.ಟಿ. ನಾಗರಾಜ್, ಪೀರ್ ಫರೀಫ್, ಅಂತೋಣಿ ವಿಲ್ಸ್ನ್, ಬಲ್ಕೀಶ್ ಭಾನು, ಲತಾ ಚಂದ್ರಶೇಖರ್, ಕಾಂತರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post