ಭದ್ರಾವತಿ: ನಗರದ ಮಿಲ್ಟ್ರಿ ಕ್ಯಾಂಪ್ ಗ್ರೌಂಡ್’ನಲ್ಲಿ ನಾಳೆ ನಡೆಯುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮಕ್ಕೆ ರಾಜಕೀಯ ಪ್ರಚಾರದ ಮಾನ್ಯತೆ ಕೊಡುವುದು ಸಲ್ಲದು. ಭದ್ರಾವತಿ ಶಾಸಕರ ಹೇಳಿಕೆಗಳು ನೋಡಿದ್ದೇವೆ. ಅವರ ಅವಧಿಯಲ್ಲಿ ಅವರೇನಾದರು ಮಾಡಿದ್ದರೆ ಅದು ಅವರ ಜವಾಬ್ದಾರಿ ಅಲ್ಲದೆ ಮತ್ತೇನು ಅಲ್ಲ ಅದರಂತೆ ಕೆಲಸ ಮಾಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಡಿ.ಟಿ. ಮೇಘರಾಜ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಅಟಲ್ ಜೀ ಸರಕಾರದಲ್ಲಿ ಶಂಕು ಸ್ಥಾಪನೆ ಮಾಡಿದ್ದ ಸುರಂಗ ಮಾರ್ಗ ನೆನೆಗುದಿಗೆ ಬಿದ್ದಿತ್ತು. ಮತ್ತೀಗ ಬಿಜೆಪಿ ಮೋದಿ ಸರಕಾರದಲ್ಲಿ ಆಗಿದೆ. ಅದು ಆಯಾ ಕಾಲದಲ್ಲಿದ್ದ ಸರಕಾರಗಳ ನಿಲುವುಗಳು. ಒಟ್ಟಾರೆ ಜನಪರ ಕೆಲಸಗಳನ್ನು ಬಿಜೆಪಿ ಮಾಡುತ್ತಿವೆ. ಇನ್ನು ಶಾಸಕರನ್ನು ಆಹ್ವಾನಿಸುವುದು ಪ್ರೊಟೋಕಾಲ್‌ನಂತೆ ಜಿಲ್ಲಾಡಳಿತ ಮತ್ತು ಸಿಆರ್’ಪಿಎಫ್ ಕೆಲಸ ಮಾಡುತ್ತದೆ. ಕಾರ್ಯಕ್ರಮಕ್ಕೆ ಬರುವವರು ಸಾಮಾಜಿಕ ಅಂತರ, ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ಯಾನಿಂಗ್ ಹಾಗು ಮಾಸ್ಕನ್ನು ಕಡ್ಡಾಯವಾಗಿ ಪಾಲಿಸಿ ಶಾಂತಿಯಿಂದ ಸಮಾರಂಭ ಯಶಸ್ವಿಗೊಳಿಸಬೇಕು ಎಂದರು.ಸಂಸದ ಬಿ.ವೈ. ರಾಘವೇಂದ್ರರ ಸಕಾಲಿಕ ಕ್ರಮ ಮತ್ತು ಶ್ರಮದಿಂದ ಮಂಜೂರಾದ ಆರ್‌ಎಎಫ್ ಬೆಟಾಲಿಯನ್‌ನಿಂದ ಟೌನ್ ಶಿಪ್ ನಿರ್ಮಾಣವಾಗುತ್ತದೆ. ಇದರಿಂದಾಗಿ ನಗರಾಭಿವೃದ್ದಿ, ಆರ್ಥಿಕ ವಹಿವಾಟುಗಳು ಹೆಚ್ಚುತ್ತದೆ. ಇದರಿಂದ ಕ್ಷೀಣಿಸಿರುವ ನಗರದ ರಂಗು ಬದಲಾಗುತ್ತದೆ. ಸಾರ್ವಜನಿಕರು ಶಾಂತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಗರಕ್ಕೆ ಒಳ್ಳೆಯ ಹೆಸರು ತರಬೇಕು. ಕಾರ್ಯಕ್ರಮಕ್ಕೆ ಬರುವವರು ಕೈಲಿ ಬ್ಯಾಗ್ ಹಿಡಿದು ಬಂದರೂ ಬಿಡಲ್ಲ. ಪೆನ್ನು ಪೇಪರ್ ಮತ್ತಿತರೆ ವಸ್ತುಗಳು ಇದ್ದರೆ ಬಿಡುವುದಿಲ್ಲವೆಂದು ಜನರಿಗೆ ಮುನ್ಸೂಚನೆ ನೀಡಿದರು.ಅಧ್ಯಕ್ಷ ಪ್ರಭಾಕರ್, ಮುಖಂಡರಾದ ವಿ. ಕದಿರೇಶ್, ಶಿವರಾಜ್, ಕೂಡ್ಲಿಗೆರೆ ಹಾಲೇಶ್, ಮಂಗೋಟೆ ರುದ್ರೇಶ್, ಜಿ. ಆನಂದ್‌ಕುಮಾರ್, ಬಿ.ಕೆ. ಶ್ರೀನಾಥ್, ರಾಮಲಿಂಗಯ್ಯ, ಆರ್.ಎಸ್. ಶೋಭಾ, ಚನ್ನೇಶ್, ಹನುಮಂತನಾಯ್ಕ, ರಾಮರಾವ್ ಬರ್ಗೆ, ರಾಜು ಮುಂತಾದವರಿದ್ದರು.
Discussion about this post