ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನೆಹರು ನಗರ ಮುಖ್ಯ ರಸ್ತೆಯ ಜಾವೀದ್ ಎನ್ನುವವರ ಅಡಿಕೆ ಗೋಡೌನ್‌ನಲ್ಲಿ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ಹಿನ್ನೆಲೆ:
ಜುಲೈ 7ರಂದು ರಾತ್ರಿ ನಗರದ ಸಾದತ್ ಕಾಲೋನಿ ನಿವಾಸಿ ಜಾವೀದ್ ಅವರಿಗೆ ಸೇರಿದ ಅಡಿಕೆ ಗೋಡೌನ್‌ನಲ್ಲಿ ಶೇಖರಿಸಿಟ್ಟಿದ್ದ ತಲಾ 35 ಕೆಜಿಯ ಒಟ್ಟು 20 ಚೀಲ ಸಿಪ್ಪೆ ಗೋಟು ಅಡಿಕೆ ತುಂಬಿದ ಚೀಲಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡ ಪಿಐ ಭದ್ರಾವತಿ ನಗರ ವೃತ್ತ, ಪಿಎಸ್‌ಐ ಭದ್ರಾವತಿ ಹಳೆನಗರ ಪೊಲೀಸ್ ಠಾಣೆ ಸಿಬ್ಬಂದಿಗಳ ತಂಡವು ಆರೋಪಿತಗಳಾದ ದಾದಪೀರ್ (29), ಸಲೀಂ (43) ಮತ್ತು ಷಫೀವುಲ್ಲಾ (32) ಅವರನ್ನು ಬಂಧಿಸಿ, 1,29,500ರೂ. ಅಂದಾಜು ಮೌಲ್ಯದ ಒಟ್ಟು 700 ಕೆಜಿ ಅಡಿಕೆ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಟಾಟಾ ಏಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















