ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ತಾಲೂಕಿನ ಕೋಮಾರನಹಳ್ಳಿ ಮತ್ತು ವೀರಾಪುರ ಎರಡು ಗ್ರಾಮ ಪಂಚಾಯಿತಿಗಳ ಚುನಾವಣೆಯ ಮತ ಎಣಿಕೆ ಇಂದು ನಡೆದಿದ್ದು, ಫಲಿತಾಂಶ ಹೊರಬಿದ್ದಿದೆ.
ಕೋಮಾರನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 13 ಸ್ವಾನಗಳಿದ್ದು, ಮಂಜುನಾಥನಾಯ್ಕ, ಕೆ. ರವಿಕುಮಾರ್, ದೇವಮ್ಮ, ಸಿ.ಎಲ್. ನೇತ್ರಾವತಿ, ಎ. ಷಣ್ಮುಗ, ಸರಸ್ವತಿ ವಿಜಯಕುಮಾರ್, ರುದ್ರಮ್ಮ ಕೃಷ್ಣಮೂರ್ತಿ, ಸುನೀತ ಸತೀಶ್, ಆರ್. ಮಾಧುರಾವ್, ನಂದಿನಿಬಾಯಿ, ಮಂಜುಳ ಮತ್ತು ಆರ್. ಮಂಜುನಾಥ್ ಆಯ್ಕೆಯಾಗಿದ್ದಾರೆ.
ಸ್ನೇಹಜೀವಿ ಬಳಗದಿಂದ ಬೆಂಬಲಿತ ಅಭ್ಯರ್ಥಿ ನಂದಿನಿಬಾಯಿ ಅವರು ಜಯ ಗಳಿಸಿದ್ದಾರೆ. ಈಗಾಗಲೇ ಘೋಷಣೆಯಾಗಿದ್ದ ಫಲಿತಾಂಶದಲ್ಲಿ ಸ್ನೇಹಜೀವಿ ಬಳಗದ ಬೆಂಬಲಿತ 5 ಅಭ್ಯರ್ಥಿಗಳು ಜಯಗಳಿಸಿದ್ದರು. ಈಗ ಮತ್ತೊಬ್ಬರು ಜಯಗಳಿಸುವ ಮೂಲಕ ಈ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ವೀರಾಪುರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 11 ಸ್ಥಾನಗಳಿದ್ದು, ರಾಧ ಮಂಗಳಮ್ಮ, ಮಂಜಮ್ಮ ಜಡಿಯಪ್ಪ, ಜಬೀವುಲ್ಲಾ, ರೇಣುಕಮ್ಮ ರಾಜು, ಲೋಲಾಕ್ಷಿ, ಪಿ. ರಂಗಸ್ವಾಮಿ, ಎಂ. ವೆಂಕಟೇಶ್, ಎಂ.ಎಲ್ ಯಶೋಧರಯ್ಯ, ಜ್ಯೋತಿ, ಅಸಿಯಾಬಾನು ಮತ್ತು ಸೈಯದ್ ಜಬೀವುಲ್ಲಾ ಆಯ್ಕೆಯಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post