ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಕರ ಹಾಗೂ ಪೋಷಕರ ಪಾತ್ರ ಮಹತ್ವವಾದದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ನಾಗೇಂದ್ರಪ್ಪ ಹೇಳಿದರು.
ನಗರದ ಜೆಪಿಎಸ್ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ ಕೆ ಜಿ, ಯು ಕೆ ಜಿ, ಉದ್ಘಾಟನಾ ಸಮಾರಂಭ, ಎಸ್ ಡಿ ಎಂ ಸಿ,ಪೋಷಕರ ಸಭೆ ಹಾಗೂ ನಿರ್ಗಮಿತ ಎಸ್ ಡಿ ಎಂ ಸಿ, ಅಧ್ಯಕ್ಷ ಉಪಾಧ್ಯಕ್ಷರ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾರು ತಮ್ಮ ಶಾಲೆಗಳ ಬಗ್ಗೆ ಅಭಿಮಾನ ಇಟ್ಟುಕೊಳ್ಳುತ್ತಾರೆ ಆ ಶಾಲೆಗಳು ಉಳಿದು ಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಹಳೇ ವಿದ್ಯಾರ್ಥಿಗಳಿಗೆ ಪುನಃ ಶಾಲೆಗಳ ಕಡೆ ನೋಡುವ ಅವಕಾಶ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ, ಮಾತುಗಾರಿಕೆ ಕಲಿಸಲು ಮುಂದಾಗಿ, ಕನ್ನಡ ಮಾತೃ ಭಾಷೆಯಾಗಿರುವುದರಿಂದ ಹೆಚ್ಚಿನ ಅವಕಾಶ ನೀಡಿ ಎಂದರು.

ಮುಖ್ಯ ಶಿಕ್ಷಕಿ ಕಲಾವತಿ ಸರ್ಕಾರದ ಸುತ್ತೋಲೆ ಹಾಗೂ ಪೋಷಕರ ಜವಾಬ್ದಾರಿ ವಿವರಿಸಿ ದರು. ಶಿಕ್ಷಕಿಯರಾದ ದೀಪಾ, ಸೌಂದರ್ಯ, ರುಕ್ಮಿಣಿ, ಲಕ್ಷ್ಮಿ ಸೇರಿದಂತೆ ಅನೇಕರಿದ್ದರು. ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿ, ಶಾಂತಲಾ ವಂದಿಸಿದರು. ಇದೆ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷರು, ಉಪಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









Discussion about this post