ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಾಡಿನೆಲ್ಲೆಡೆ ನಾಡ ಹಬ್ಬ ದಸರಾ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ಗೊಂಬೆ ಅಲಂಕಾರದ ಮೆರುಗು ವೈಭವವನ್ನು ಹೆಚ್ಚಿಸಿದೆ. ಇದಕ್ಕೆ ಮುಕುಟಪ್ರಾಯದಂತೆ ಭದ್ರಾವತಿಯ ಪ್ರಖ್ಯಾತ ಆಡಿಟರ್ ಶ್ರೀಪಾದ ಅವರ ನಿವಾಸದಲ್ಲಿ ಅನಾವರಣಗೊಂಡಿರುವ ಗೊಂಬೆ ಅಲಂಕಾರ ಗಮನ ಸೆಳೆಯುತ್ತಿದೆ.
ಎನ್’ಎಂಸಿ 2ನೆಯ ಅಡ್ಡರಸ್ತೆಯಲ್ಲಿರುವ ಶ್ರೀಪಾದ ಅವರ ನಿವಾಸದಲ್ಲಿ ಅವರ ಪತ್ನಿ ಚಂದ್ರಿಕಾ ಅವರು ಅಲಂಕಾರ ಮಾಡಿರುವ ಗೊಂಬೆಗಳ ಪ್ರದರ್ಶನ ಸಾಂಪ್ರದಾಯಿತೆಯಿಂದ ಆಧುನಿಕತೆಯವರೆಗೂ ವಿವಿಧ ಮಜಲುಗಳನ್ನು ಅನಾವರಣಗೊಳಿಸಿದೆ.
ಚಂದ್ರಿಕಾ ಅವರು ಸುಮಾರು 25 ವರ್ಷಗಳಿಂದ ಈ ಗೊಂಬೆ ಅಲಂಕಾರ ಮಾಡುವ ಸಂಪ್ರದಾಯವನ್ನು ಪಾಲಿಸುತ್ತಿದ್ದು, ಈ ಬಡಾವಣೆಯ ದಸರಾ ವೈಭವದ ಮೆರುಗನ್ನು ಹೆಚ್ಚಿಸಿದ್ದಾರೆ.
ಸಾಂಪ್ರದಾಯಿಕ ಪಟ್ಟದಗೊಂಬೆ, ಮೈಸೂರು ದಸರಾ ಮೆರವಣಿಗೆ, ತಾಯಿ ಚಾಮುಂಡೇಶ್ವರಿಯ ಪ್ರತಿಮೆ, ಸೀತಾ ಕಲ್ಯಾಣ, ಶ್ರೀನಿವಾಸ ಕಲ್ಯಾಣ, ಜಗನ್ನಿಯಾಮಕ ಶ್ರೀಕೃಷ್ಣನ ವಿವಿಧ ಲೀಲಾ ವಿನೋದ, ತಿರುಪತಿ ಗಿರಿವಾಸ ವೆಂಕಟೇಶ ಸ್ವಾಮಿಯ ಅಲಂಕಾರ, ವಿವಿಧ ದೇವಾನುದೇವತೆಗಳ ಅಲಂಕಾರ, ಸಾಂಪ್ರದಾಯಿ ವಾದ್ಯವೃಂದ, ದಾಸ ಪರಂಪರೆ, ಕ್ರಿಕೆಟ್ ಪಂದ್ಯಾವಳಿಯ ಅಲಂಕಾರ, ಗಣೇಶನ ವಿವಿಧ ಭಂಗಿಗಳು, ಗ್ರಾಮೀಣ ಜೀವನಶೈಲಿ, ಪರಿಸರ ಸಂರಕ್ಷಣೆಯ ಅಲಂಕಾರ ಸೇರಿದಂತೆ ನೂರಾರು ಗೊಂಬೆಗಳನ್ನು ಇವರು ತಮ್ಮ ನಿವಾಸದಲ್ಲಿ ಅಲಂಕರಿಸಿದ್ದು, ನವರಾತ್ರಿ ಹಬ್ಬದ ಕಳೆಯನ್ನು ಹೆಚ್ಚಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
 
	    	







 Loading ...
 Loading ... 
							



 
                
Discussion about this post