ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಬೈಪಾಸ್ ಬಳಿ ಹೊಸ ಸಿದ್ಧಾಪುರ ಮಾರ್ಗದಲ್ಲಿರುವ ಶ್ರೀವೀರಾಂಜನೇಯ ಸ್ವಾಮಿ ದೇವಾಲಯದ ಬೀಗ ಮುರಿದು ದೇವರ ಬೆಳ್ಳಿಯ ಮುಖವಾಡ, ಕಂಠೀಹಾರ, ದೇವರ ಬೆಳ್ಳಿ ಹಸ್ತ ಹಾಗೂ ಪೆನ್ ಡ್ರೆûವ್ ಅನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಘಟನೆ ಫೆ.21ರ ರಾತ್ರಿ ನಡೆದಿದ್ದು, ಸೋಮವಾರ ಬೆಳಿಗ್ಗೆ ಈ ವಿಷಯ ತಿಳಿದು ದೇವಾಲಯದ ಸಮಿತಿಯವರು ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದೇ ವೇಳೆ ಬೊಮ್ಮನಕಟ್ಟೆ ಬಳಿಯ ದೇವಾಲಯವೊಂದರಲ್ಲೂ ಸಹ ಕಳ್ಳತನ ನಡೆದಿದೆ ಎಂದು ಹೇಳಲಾಗಿದ್ದರೂ, ಈ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
ದೇವರ ತಾಳಿ ಮತ್ತು ಹುಂಡಿ ಹಣ ಕಳುವು
ಬೊಮ್ಮನಕಟ್ಟೆಯಲ್ಲಿರುವ ಶ್ರೀಕಾಳಿಂಗೇಶ್ವರ ದೇವಾಲಯದ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಬೊಮ್ಮನಕಟ್ಟೆಯ ಶ್ರೀಕಾಳಿಂಗೇಶ್ವರ ದೇವಾಲಯದ ಬೀಗ ಮುರಿದು ಸುಮಾರು ಹತ್ತು ಸಾವಿರ ಮೌಲ್ಯದ 1 ಗ್ರಾಂ ಬಂಗಾರದ ತಾಳಿ ಹಾಗೂ ದೇವಾಲಯದಲ್ಲಿದ್ದ ಹುಂಡಿಯನ್ನು ಒಡೆದು ಅದರಲ್ಲಿದ್ದ ಸುಮಾರು 10-15 ಸಾವಿರ ಹಣವನ್ನು ಕಳವು ಮಾಡಲಾಗಿದೆ.
ಈ ಕುರಿತಂತೆ ಸೋಮವಾರ ಬೆಳಿಗ್ಗೆ ದೇವಾಲಯದ ಸಮಿತಿಯವರ ಗಮನಕ್ಕೆ ಬಂದಿದ್ದು ಅವರು ಕಾಗದನಗರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ ಮೆರೆಗೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post