ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭದ್ರಾ ನಾಲೆಯಲ್ಲಿ ಸ್ನಾನ ಮಾಡಲು ತೆರಳಿದ್ದ ಇಬ್ಬರು ಮಕ್ಕಳು ನೀರು ಪಾಲಾಗಿರುವ ಘಟನ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ಅಗರದಹಳ್ಳಿ ಗ್ರಾಮದ ಲೋಹಿತ್ ಎಂಬುವರ ಮಕ್ಕಳಾದ ಚಂದನಾ(14) ಹಾಗೂ ಹರ್ಷ (10) ನೀರುಪಾಲಾಗಿದ್ದು, ಇವರು ತಮ್ಮ ದೊಡ್ಡಪ್ಪನ ಜೊತೆ ಭದ್ರಾ ನಾಲೆಗೆ ಸ್ನಾನಕ್ಕೆಂದು ತೆರಳಿದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಸಿದ್ದಾಪುರ ಗ್ರಾಮದ ಭದ್ರಾ ಬಲದಂಡೆ ಕಾಲುವೆಯಲ್ಲಿ ದೊಡ್ಡಪ್ಪನ ಜೊತೆ ನಾಲ್ವರು ಮಕ್ಕಳು ಈಜಲು ಹೋಗಿದ್ದು ನಾಲ್ವರು ಕೈಕೈ ಹಿಡಿದು ನೀರಿಗೆ ಇಳಿದಿದ್ದಾರೆ. ಈ ವೇಳೆ ದೊಡ್ಡಪ್ಪರಾದ ಕುಬೇರಪ್ಪ ಒಬ್ವಳನ್ನ ಹಿಡಿದುಕೊಂಡ ಪರಿಣಾಮ ಒಂದು ಮಗುವನ್ನ ರಕ್ಷಣೆ ಮಾಡಿದ್ದಾರೆ. ಇನ್ನೂ ಮೂವರು ಮಕ್ಕಳು ನೀರು ಪಾಲಾಗಿದ್ದಾರೆ.
Also read: ಸಂಪುಟ ವಿಸ್ತರಣೆ-ಯಾವಾಗ ಏನು ಬೇಕಾದರೂ ಆಗಬಹುದು: ಕುತೂಹಲ ಮೂಡಿಸಿದ ಸಿಎಂ ಹೇಳಿಕೆ
ನೀರಿನಲ್ಲಿ ಮುಳುಗಿರುವ ಮೂವರ ಮಕ್ಕಳನ್ನ ಅಲ್ಲಿ ಕುರಿ ಕಾಯುತ್ತಿದ್ದ ಕುರಿಗಾಹಿಯೊಬ್ಬನು ಕಂಡು ನೀರಿನಲ್ಲಿ ಈಜಿ ಒಂದು ಮಗುವನ್ನು ರಕ್ಷಣೆ ಮಾಡಿದ್ದಾರೆ. ಉಳಿದ ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.
ಅಗ್ನಿಶಾಮಕ ದಳ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದರೂ. ಮಕ್ಕಳು ಪತ್ತೆಯಾಗಿಲ್ಲ. ನಿನ್ನೆ ಸಂಜೆ ಕತ್ತಲಾದ ಪರಿಣಾಮ ಕಾರ್ಯಾಚರಣೆ ಇಂದು ಸಹ ಮುಂದುವರೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post