No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
  • Advertise With Us
  • Grievances
  • About Us
  • Contact Us
Wednesday, July 8, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಗರ್ಭಿಣಿಯರೇ, ಬೇಸಿಗೆಯಲ್ಲಿ ನೀವು ಈ ಜಾಗ್ರತೆ ವಹಿಸಲೇಬೇಕು

ಮುಂಗಾರು ಮಳೆಯಂತಹ ವಾತಾವರಣವಿದ್ದರೂ ಬೇಸಿಗೆ ಇನ್ನೂ ಮುಗಿದಿಲ್ಲ ನೆನಪಿಡಿ!

kalpa News by kalpa News
May 12, 2022
in Special Articles
0
ಗರ್ಭಿಣಿಯರೇ, ಬೇಸಿಗೆಯಲ್ಲಿ ನೀವು ಈ ಜಾಗ್ರತೆ ವಹಿಸಲೇಬೇಕು
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ವಾತಾವರಣದ ವೈಪರೀತ್ಯದಿಂದ ಈಗ ಮಳೆ ಬೀಳುತ್ತಿದ್ದರೂ ಬೇಸಿಗೆ ಕಾಲ ಇನ್ನೂ ಮುಗಿದಿಲ್ಲ. ಮೂರು ನಾಲ್ಕು ದಿನ ಮಳೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದ್ದು, ಆನಂತರ ಬಿಸಿಲಿನ ತಾಪಮಾನ ಮತ್ತುಷ್ಟು ಹೆಚ್ಚಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಹೀಗಾಗಿ, ಈ ಬಿಸಿಲಿನ ಕಾಲದಲ್ಲಿ ಗರ್ಭಿಣಿಯರು ವಹಿಸಬೇಕಾದ ಕೆಲವು ಮುಂಜಾಗ್ರತೆಗಳು ಹೀಗಿವೆ.

Also Read: ಭದ್ರಾವತಿಯಲ್ಲಿ ವ್ಯಕ್ತಿಯ ಅಡ್ಡಗಟ್ಟಿ ಹಣ ದರೋಡೆ: ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

ಗರ್ಭಾವಸ್ಥೆಯ ವೇಳೆ ಮಹಿಳೆ ಗರಿಷ್ಠ ಕಾಳಜಿ ಹಾಗೂ ಜೋಪಾನ ಮಾಡಬೇಕಾದ್ದು ಅನಿವಾರ್ಯ. ಕೊಂಚ ನಿರ್ಲಕ್ಷ ವಹಿಸಿ ದೇಹ ಅಥವಾ ಮಾನಸಿಕ ಆರೋಗ್ಯದಲ್ಲಿ ಕೊಂಚ ಏರುಪೇರಾದರೂ ಅದು ನೇರವಾಗಿ ಗರ್ಭದಲ್ಲಿರುವ ಶಿಶುವಿನ ಮೇಲೆ ಪರಿಣಾಮ ಬೀರುತ್ತದೆ. ಗರ್ಭಿಣಿ ಮಹಿಳೆಯರು ಬೇಸಿಗೆ ಸಮಯದಲ್ಲಿ ತಮ್ಮ ದೇಹದ ಆರೋಗ್ಯಕ್ಕೆ ಪೂರಕವಾದ ಸಲಹೆಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿದ್ದು, ಸೇವಿಸುವ ಆಹಾರದ ಜೊತೆಗೆ ತಾವು ತೊಡುವ ಬಟ್ಟೆಗಳ ಬಗ್ಗೆಯೂ ಜಾಗೃತಿ ವಹಿಸಬೇಕಾದುದು ಮುಖ್ಯವಾಗುತ್ತದೆ.
ಸಾಮಾನ್ಯವಾಗಿ ಬೇಸಿಗೆ ಕಾಲ ಎಂದರೆ ಬಹುತೇಕರಿಗೆ ಕಿರಿಕಿರಿಯ ಋತುಮಾನ. ಉರಿಉರಿ ಬಿಸಿಲು, ಸೆಖೆ, ಬೆವರುವಿಕೆ, ಮೈ ತುರಿಕೆ ಹೀಗಿ ಇತ್ಯಾದಿಗಳಿಂದ ಇದು ಮುಗಿದರೆ ಸಾಕು ಎನ್ನುತ್ತಾರೆ. ಇಂತಹ ಕಾಲಮಾನದಲ್ಲಿ ಗರ್ಭಿಣಿಯರ ಪಾಡಂತೂ ಇನ್ನೂ ಕಷ್ಟವೇ ಸರಿ. ಬೇಸಿಗೆ ಕಾಲದಲ್ಲಿ ಬಸುರಿಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದ್ದು, ಇದು ತಪ್ಪಿದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹೀಗಾಗಿ, ಬೇಸಿಗೆ ಕಾಲದಲ್ಲಿ ಗರ್ಭಿಣಿಯರಿಗೆ ಆಗುವ ಸಮಸ್ಯೆಗಳು ಹಾಗೂ ವಹಿಸಬೇಕಾದ ಮುಂಜಾಗ್ರತೆಯ ಕುರಿತಾಗಿ ಈ ಲೇಖನದಲ್ಲಿ ತಿಳಿಯೋಣ.

ಏನೆಲ್ಲಾ ಸಮಸ್ಯೆಗಳ ಸಾಧ್ಯತೆ?
ವಾಂತಿ-ವಾಕರಿಕೆ
ಗರ್ಭಾವಸ್ಥೆಯಲ್ಲಿ ಬಹಳಷ್ಟು ಮಹಿಳೆಯರಿಗೆ ಗರ್ಭಾವಸ್ಥೆಯ ಸಂದರ್ಭದಲ್ಲಿ ವಾಂತಿ ಹಾಗೂ ವಾಕರಿಕೆ ಬಹಳ ಸಹಜವಾದುದು. ಅದರಲ್ಲೂ ಮಸಾಲೆಯುಕ್ತ ಹಾಗೂ ಫಾಸ್ಟ್ ಫುಡ್ ತಿಂದಾಗ ಈ ಸಮಸ್ಯೆ ಹೆಚ್ಚಿರುತ್ತದೆ. ಅತಿಯಾದ ವಾಂತಿ ದೇಹ ನಿರ್ಜಲೀಕರಣ ಮತ್ತು ದೌರ್ಬಲ್ಯಕ್ಕೆ ಕಾರಣವಾಗಬಹುದು.
ಉಸಿರಾಟದ ತೊಂದರೆ
ಗರ್ಭಾವಸ್ಥೆಯಲ್ಲಿ ಗರ್ಭಕೋಶವು ಬೆಳವಣಿಗೆಯಾಗುವ/ವ್ಯಾಪ್ತಿ ವಿಸ್ತಾರವಾಗುವ ಕಾರಣ ಶ್ವಾಸಕೋಶ ಸಂಕುಚಿತಗೊಳ್ಳುವ ಸಾಧ್ಯತೆ ಬಹುತೇಕ ಇರುತ್ತದೆ. ಇದು ಆಕೆ ಉಸಿರಾಟಕ್ಕೆ ತೊಂದರೆ ಮಾಡುವ ಜೊತೆಗೇ, ಬಿಸಿಲಿನ ತಾಪಮಾನ ಅಧಿಕವಾದಾಗ ಇನ್ನೂ ಉಲ್ಬಣಗೊಳ್ಳುವ ಸಾಧ್ಯತೆಯಿರುತ್ತದೆ.

ಅಜೀರ್ಣ
ಬಹಳಷ್ಟು ಗರ್ಭಿಣಿಯರಿಗೆ ಈ ವೇಳೆಯಲ್ಲಿ ಊಟ ಮಾಡಲು ಕಷ್ಟವಾಗುತ್ತದೆ. ಗರ್ಭಾಶಯ ಬೆಳೆಯುತ್ತಾ ಹೋದಂತೆ ಅನ್ನನಾಳದ ಮೂಲಕ ಹೊಟ್ಟೆಗೆ ಆಹಾರ ತಲುಪಿಸುವ ಪ್ರಕ್ರಿಯೆ ನಿಧಾನವಾಗುತ್ತದೆ. ಇದು ಆಹಾರ ಸೇವಿಸಲು ಕಷ್ಟವಾಗಿಸುತ್ತದೆ. ಮಾತ್ರವಲ್ಲ ಅಜೀರ್ಣ ಹಾಗೂ ಹೊಟ್ಟು ಉಬ್ಬರ ಹಾಗೂ ಅಸಿಡಿಟಿಗೆ ಕಾರಣವಾಗುತ್ತದೆ.

Also Read: ಅಯ್ಯೋ ದುರ್ವಿಧಿಯೇ! ಭದ್ರಾ ನಾಲೆಗೆ ಸ್ನಾನಕ್ಕೆ ತೆರಳಿದ್ದ ಕಂದಮ್ಮಗಳು ನೀರು ಪಾಲು

ಕಾಲುಗಳ ಊತ
ಗರ್ಭಧಾರಣೆಯ ಮೊದಲ ಮೂರು ತಿಂಗಳ ನಂತರ ಪಾದಗಳು ಮತ್ತು ಕಾಲುಗಳಲ್ಲಿ ದ್ರವದ ಸಂಗ್ರಹವಾಗುತ್ತದೆ. ಇದರಿಂದ ಪಾದಗಳು, ಕಾಲುಗಳು, ಬೆರಳುಗಳು ಹಾಗೂ ಮುಖದಲ್ಲಿ ಹಠಾತ್ ಊತಗಳಾಗುತ್ತಿರುವುದು ಕಂಡು ಬರುತ್ತದೆ. ಇದು ಅಧಿಕ ರಕ್ತದೊತ್ತಡದ ಸಂಕೇತವೂ ಆಗಿರಬಹುದಾಗಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಬೇಕು.

ಈ ಸಲಹೆಗಳನ್ನು ತಪ್ಪದೇ ಪಾಲಿಸಿ
ಅಧಿಕ ನೀರನ್ನು ಕುಡಿಯಿರಿ
ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗಿ ಡಿಹೈಡ್ರೇಷನ್ ಆಗುತ್ತದೆ. ಹೀಗಾಗಿ, ಈ ಸಂದರ್ಭದಲ್ಲಿ ಗರ್ಭಿಣಿಯರು ಹೆಚ್ಚಿನ ಜಾಗ್ರತೆ ವಹಿಸಬೇಕು.

ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಅಧಿಕ ನೀರು ಕುಡಿಯಬೇಕು. ಬಾಯಾರಿಕೆಯಗದೇ ಇದ್ದರೂ ನೀರನ್ನು ಸೇವಿಸುತ್ತಿರಬೇಕು. ಇದು ಗರ್ಭಿಣಿಯರಿಗೆ ಆಗುವ ಆಯಾಸವನ್ನು ಕಡಿಮೆ ಮಾಡುತ್ತದೆ. ಅಲ್ಲದೇ, ನೀರಿನ ಅಂಶವಿರುವ ಹಣ್ಣು-ಪದಾರ್ಥವನ್ನು ಸೇವಿಸುವುದು ಉತ್ತಮ.
ಪೌಷ್ಠಿಕಾಂಶಯುಕ್ತ ಆಹಾರ ಸೇವಿಸಿ
ಗರ್ಭಿಣಿಯರು ಸಮಯ ನಿಗದಿಪಡಿಸಿಕೊಂಡು ಸರಿಯಾದ ವೇಳೆಗೆ ಆಹಾರ ಸೇವಿಸಬೇಕು. ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ನಿಗದಿತ ಸಮಯವಿರಲಿ. ಹಣ್ಣು ಹಾಗೂ ತರಕಾರಿ ಜೊತೆಯಲ್ಲಿ ಪ್ರೊಟೀನ್‌ಯುಕ್ತ ಆಹಾರ ಹೆಚ್ಚು ಸೇವಿಸಿ. ಸೇವಿಸುವ ಪ್ರತಿ ಆಹಾರದಲ್ಲೂ ಪೋಷಕಾಂಶವಿರಲಿ.

ದಿನಕ್ಕೆ ಕನಿಷ್ಠ ಎರಡು ಬಾರಿ ಸ್ನಾನ ಮಾಡಿ
ಬೇಸಿಗೆಯಲ್ಲಿ ಮೈ ಬೆವರುವುದು ಹೆಚ್ಚು. ಗರ್ಭಾವಸ್ಥೆಯಲ್ಲಿ ಹೀಗೆ ಮೈ ಬೆವತರೆ ಅತ್ಯಂತ ಕಿರಿಕಿರಿಯಾಗುತ್ತದೆ. ಇದು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಹೀಗಾಗಿ, ಬೆಳಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಸ್ನಾನ ಮಾಡಿ. ಸಾಧ್ಯವಾದಷ್ಟು ಆಹಾರ ಸೇವೆನೆಯ ತತಕ್ಷಣ ಸ್ನಾನ ಮಾಡುವುದು ಬೇಡ.

ಪ್ರತಿದಿನ ವ್ಯಾಯಾಮ ಮಾಡಿ
ಮೂರನೆಯ ತಿಂಗಳವರೆಗೂ ಗರ್ಭಿಣಿಯರು ಅತ್ಯಂತ ಸೂಕ್ಷ್ಮವಾಗಿದ್ದು, ಆನಂತರೂ ಸಹ ವಿಶೇಷ ಜಾಗ್ರತೆ ವಹಿಸಬೇಕು. ಮೂರು ತಿಂಗಳ ತುಂಬಿದ ನಂತರ ತಜ್ಞ ವೈದ್ಯರ ಸಲಹೆ ಪಡೆದು ನಿಯಮಿತವಾಗಿ ಲಘು ವ್ಯಾಯಾಮ ಮಾಡುವುದು ಉತ್ತಮ.
ಪ್ರಯಾಣದ ಸಂದರ್ಭದಲ್ಲಿ ಜಾಗ್ರತೆಯಿರಲಿ
ಗರ್ಭಿಣಿಯರು ಅತಿಯಾದ ಭಾರ ಎತ್ತುವಂತಹ ಕೆಲಸ ಮಾಡುವುದು ಅಪಾಯಕಾರಿಯಾಗಿದ್ದು, ಇದು ನೇರವಾಗಿ ಗರ್ಭದಲ್ಲಿರುವ ಶಿಶುವಿನ ಮೇಲೆ ಪರಿಣಾಮ ಬೀರುತ್ತದೆ.

ಇನ್ನು, ಪ್ರಯಾಣ ಮಾಡುವ ವೇಳೆ ಅತಿ ಜಾಗ್ರತೆ ವಹಿಸಬೇಕು. ಅತಿ ದೂರದ ಪ್ರಯಾಣ, ಸರಿಯಲ್ಲದೆ ರಸ್ತೆ, ರಸ್ತೆ ಉಬ್ಬುಗಳ ಸಂದರ್ಭದಲ್ಲಿ ಕಾಳಜಿ ವಹಿಸಬೇಕು. ಇದರೊಂದಿಗೆ ಬಿಸಿಲಿನಲ್ಲಿ ಪ್ರಯಾಣ ಮಾಡುವುದು, ನಡೆದಾಡುವುದನ್ನು ಮಾಡಬೇಡಿ.

ಬಟ್ಟೆಗಳ ಬಗ್ಗೆ ಗಮನವಿರಲಿ
ಬೇಸಿಗೆಯಲ್ಲಿ ಬಹುತೇಕ ಎಲ್ಲರೂ ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ. ಅದರಲ್ಲೂ ಗರ್ಭಿಣಿಯರು ತಾವು ಧರಿಸುವ ಬಟ್ಟೆಗಳ ಕುರಿತಾಗಿ ಕಾಳಜಿ ವಹಿಸಬೇಕು. ತೊಡುವ ಬಟ್ಟೆಗಳು ಸಾಕಷ್ಟು ಸಡಿಲ ಹಾಗೂ ಗಾಳಿಯಾಡುವಂತೆ ಇರಬೇಕು. ಹೆಚ್ಚು ಶಾಖವನ್ನು ಹೀರಿಕೊಳ್ಳುವಂತಹ ಬಣ್ಣ ಮತ್ತು ಬಟ್ಟೆಯನ್ನು ಆಯ್ಕೆ ಮಾಡಬಾರದು. ಆದಷ್ಟು ಹತ್ತಿ ಬಟ್ಟೆಯ ಆಯ್ಕೆ ಮಾಡಿಕೊಳ್ಳಬೇಕು. ಹತ್ತಿ ಬಟ್ಟೆಯಲ್ಲಿ ತಂಪಾದ ಹಾಗೂ ಗಾಳಿಯಾಡುವಂತಹ ಅನುಭವ ನೀಡುತ್ತದೆ. ಹಗುರವಾಗಿರುವ ಹತ್ತಿ ಬಟ್ಟೆಗಳು ಆರಾಮದಾಯಕ ಅನುಭವ ನೀಡುತ್ತವೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: ClothDehydrationHealth ArticleHealth Article in KannadahospitalIndigestionKannada News WebsiteLatest News KannadaPregnantSpecial ArticleSummerSummer PrecautionsVomitಅಜೀರ್ಣಗರ್ಭಕೋಶಗರ್ಭಾವಸ್ಥೆಗರ್ಭಿಣಿಡಿಹೈಡ್ರೇಷನ್ಬಟ್ಟೆಬಿಸಿಲಿನ ತಾಪಮಾನಬೇಸಿಗೆವಾಂತಿಹವಾಮಾನ
Share212Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಅಯ್ಯೋ ದುರ್ವಿಧಿಯೇ! ಭದ್ರಾ ನಾಲೆಗೆ ಸ್ನಾನಕ್ಕೆ ತೆರಳಿದ್ದ ಕಂದಮ್ಮಗಳು ನೀರು ಪಾಲು

Next Post

ಬೆಳಗಾವಿಯಲ್ಲಿರುವ 700 ಎಕರೆ ಜಮೀನು ಹಸ್ತಾಂತರ: ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ಆಶ್ವಾಸನೆ

kalpa News

kalpa News

Next Post
ಏ.20, 21ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿವಮೊಗ್ಗಕ್ಕೆ ಭೇಟಿ…

ಬೆಳಗಾವಿಯಲ್ಲಿರುವ 700 ಎಕರೆ ಜಮೀನು ಹಸ್ತಾಂತರ: ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ಆಶ್ವಾಸನೆ

Leave a Reply Cancel reply

Your email address will not be published. Required fields are marked *

No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL