ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇತ್ತೀಚೆಗೆ ದೀಪಾವಳಿ ಗೋಪೂಜೆ ದಿನವೇ ಹೊಸಮನೆಯ ನಿವಾಸವೊಂದರಲ್ಲಿ ಗೋಮಾತೆ ಅವಳಿ ಕರುವಿಗೆ ಜನ್ಮ ನೀಡಿದೆ.
ಹೊಸಮನೆ ಶಿವಾಜಿ ವೃತ್ತದ ಎಸ್. ಗಣಪತಿ ಆಚಾರ್ ಎನ್ನುವವರಿಗೆ ಸೇರಿದ ಗೋವು ಎರಡು ಕರುಗಳಿಗೆ ಜನ್ಮ ನೀಡಿದೆ. ಹಸು ಹಾಗೂ ಕರುಗಳು ಆರೋಗ್ಯವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ದೀಪಾವಳಿಯ ಗೋಪೂಜೆ ದಿನವೇ ಈ ಗೋಮಾತೆ ಅವಳಿ ಕರುಗಳಿಗೆ ಜನ್ಮ ನೀಡಿರುವುದು ವಿಶೇಷವಾಗಿದೆ. ವಿಷಯ ತಿಳಿದು ಬಹಳಷ್ಟು ಮಂದಿ ಭೇಟಿ ನೀಡಿ ಅವಳಿ ಕರುಗಳನ್ನು ನೋಡಿ ಸಂಭ್ರಮಿಸಿದ್ದಾರೆ.
ಶಿವಮೊಗ್ಗದಲ್ಲೂ ಅವಳಿ ಕರುಗಳಿಗೆ ಜನನ:
ನಗರದ ಹೊರವಲಯ ಮಲವಗೊಪ್ಪ ಗ್ರಾಮದ ಆಕಳೊಂದು ಅವಳಿ ಕರುಗಳಿಗೆ ಜನ್ಮವಿತ್ತ ಘಟನೆ ನಡೆದಿದೆ.
ತೇರ್ಥಪ್ಪ ಎಂಬುವರಿಗೆ ಈ ಆಕಳು ಸೇರಿದ್ದಾಗಿದ್ದು, ಎರಡು ಕರುಗಳು ಆರೋಗ್ಯವಾಗಿವೆ. ಇದರಲ್ಲಿ ಒಂದು ಗಂಡು ಹಾಗೂ ಮತ್ತೊಂದು ಹೆಣ್ಣು ಕರುವಾಗಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post